‘ಇದೊಂದು ಮಂತ್ರ ಕಲಿತರೆ ಸಾಕು’ ಅಂದಳು ಆಕೆ.
ಬಹುಶಃ ಹತ್ತು ವರ್ಷ ಇದ್ದಿರಬಹುದು ನನಗೆ. ಆ ದಿನ ಚಂದ್ರಗುತ್ತಿಯಲ್ಲಿ ಬೀಡುಬಿಟ್ಟಿದ್ದ ಜಮಖಂಡಿ ನಾಟಕ ಕಂಪನಿಯವರು “ಶ್ರೀ ಸತ್ಯ ನಾರಾಯಣ ವ್ರತ ಪೂಜಾ ಫಲ”ಎಂಬ ನಾಟಕವನ್ನು ಆಡಿಸುತ್ತಿದ್ದರು. ಅದರಲ್ಲಿ ಬರುವ ಬಾಲಕನೊಬ್ಬನ ಪಾತ್ರ ಮಾಡುತ್ತಿದ್ದ ಹುಡುಗ ಲಭ್ಯವಿರದಿದ್ದ ಕಾರಣಕ್ಕಾಗಿ, ಆ ಸಂಸ್ಥೆಯ ಪ್ರಮುಖ ಹಾಸ್ಯ ನಟಿಯಾದ ಆಕೆ ನನ್ನನ್ನು ಸಿದ್ಧಪಡಿಸುತ್ತಿದ್ದಳು.
“ತ್ವಮೇವ ಮಾತಾ ಚ ಪಿತಾ ತ್ವಮೇವ,
ತ್ವಮೇವ ಬಂಧುಶ್ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವೀಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವ ದೇವಾ”
ಇದಿಷ್ಟು ಮಂತ್ರ. ಇದರ ಅರ್ಥ ತಾಯಿ-ತಂದೆ, ಬಂಧು-ಗೆಳೆಯರು, ವಿದ್ಯೆ-ಸಂಪತ್ತು ಎಲ್ಲವೂ ನೀನೆ, ನೀನೇ ನನ್ನ ಸರ್ವಸ್ವ ಎಂದು.
ಅನಂತರ ಅನೇಕ ವರ್ಷಗಳವರೆಗೆ ನಾನು ಈ ಭಕ್ತಿಯ ಮಾರ್ಗ ಮತ್ತು ಅದರ ಸ್ವರೂಪಗಳ ಅಭ್ಯಾಸ ಮತ್ತು ಅಧ್ಯಯನ ಮಾಡಿದ್ದೇನೆ.
ಓದಿದ್ದು ಪತ್ರಿಕೋದ್ಯಮ, ಕೆಲಸ ಮಾಡಿದ್ದು “ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್”, “ಗೂಗಲ್”, “ಯಾಹೂ” ನಂತಹ ಸಂಸ್ಥೆಗಳಲ್ಲಿ.
ಆದರೆ ನನ್ನ ಮುಖ್ಯ ಗುರಿ ಮನುಷ್ಯನ ಕಷ್ಟ ಮತ್ತು ದುಃಖಕ್ಕೆ ಕಾರಣ ಏನು ಎಂಬುದನ್ನು ಅರಿತುಕೊಳ್ಳುವುದು ಮತ್ತು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಆಗಿತ್ತು.
ಸರಿಯಾಗಿ ಅರ್ಥಮಾಡಿಕೊಂಡು ಆಚರಿಸಿದಲ್ಲಿ, ಮನುಷ್ಯನ ಹೆಚ್ಚಾನೆಚ್ಚು ಸಮಸ್ಯೆಗಳನ್ನು ಭಕ್ತಿಮಾರ್ಗವೊಂದೇ ಪರಿಹರಿಸುತ್ತದೆ.
ಆದ್ದರಿಂದಲೇ ನಾನು ಈಗ “ಭಕ್ತಿಯೆಂಬ ಮಹಾಯೋಗ” ಎಂಬ ಆನ್-ಲೈನ್ ಕೋರ್ಸ್ ಕಲಿಸಲು ಪ್ರಾರಂಭಿಸಿದ್ದೇನೆ.
ಕೇವಲ ಮೂರು ಹಂತಗಳಲ್ಲಿ ಈ ಭಕ್ತಿ-ಮಾರ್ಗ ನಿಮ್ಮ ಜೀವನವನ್ನು ಗೆಲುವಿನಿಂದ-ಗೆಲುವಿನೆಡೆಗೆ ಕರೆದೊಯ್ಯುತ್ತದೆ.
ಇದರ ಹೊರತಾಗಿ ನಾನು ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಆನ್‌ಲೈನ್ ಕೋಚಿಂಗ್ ಕೂಡಾ ನೀಡುತ್ತಿದ್ದೇನೆ.
ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೆ ಕೆಳಗೆ ಅಭಿಪ್ರಾಯ ವಿಭಾಗದಲ್ಲಿ ಕೇಳಬಹುದು. ಇಲ್ಲದಿದ್ದರೆ, Facebook & Twitter ನಲ್ಲಿ ಕೇಳಬಹುದು.