ಪದ್ಮಪಾದ ಮತ್ತು ಬರಹಗಾರರ ಸ್ಪೂರ್ತಿಯ ರಹಸ್ಯ

ಸಾಹಿತಿಗಳು, ಕವಿಗಳು ತಮಗೆ ದೈವಿಕ ಸ್ಪೂರ್ತಿ ದೊರೆಯುತ್ತದೆ, ಹಾಗಾಗಿ ಶ್ರೇಷ್ಟವಾದದ್ದನ್ನು ರಚಿಸುತ್ತೇವೆ (ಹಾಗಾಗಿ ನಾವು ಶ್ರೇಷ್ಟರು?!) ಅನ್ನುತ್ತಾರೆ. ಇಲ್ಲ ಅಂತದ್ದೇನಿಲ್ಲ, ಎಲ್ಲಾ ರೀತಿಯ ಸೃಜನಶೀಲತೆಯೂ ಮನುಷ್ಯಪ್ರಯತ್ನದಿಂದ ಸಾಧ್ಯವಾಗುತ್ತದೆ – ಕತ್ತಿ ಮಸೆಯುವುದಕ್ಕೂ, ಕವಿತೆ ಹೊಸೆಯುವುದಕ್ಕೂ ಅಷ್ಟೇ ಚಾತುರ್ಯ ಬೇಕಾಗುತ್ತದೆ – ಅದು ಚಾತುರ್ಯ ಅಷ್ಟೇ ಅಂತ ಇತರರು ವಾದ ಮಾಡುತ್ತಾರೆ. ಆದರೆ ಅನೇಕ ವಿಜ್ಞಾನಿಗಳು, ಸಂಶೋಧಕರು ಕೂಡಾ ತಾವು ಪ್ರಯತ್ನದ ತುತ್ತತುದಿಯೇರಿಯೂ ಸಫಲತೆಯನ್ನು ಪಡೆಯದೇ ನಿಂತಿದ್ದಾಗ, ಯಾವುದೋ ಕೈ ತಮ್ಮನ್ನು ಹಿಡಿದೆತ್ತಿತು ಅನ್ನುವುದನ್ನು ಹೇಳಿದ್ದಾರೆ. ಸುಮ್ಮನೇ ಒಂದಷ್ಟು…

Continue reading →

ಬರಹಗಾರರು ಮಾಡಬಾರದ ತಪ್ಪುಗಳು: ಟಿಪ್ಪಣಿ – 1

ಓದುವುದು, ಮಾತನಾಡುತ್ತ ಭಾಷೆ ಕಲಿಯುವುದು ಬೇರೆ. ಬರವಣಿಗೆಯನ್ನು ಮಾತ್ರ ಬರೆದೇ ಕಲಿಯಬೇಕು. ಪ್ರಬಂಧಗಳೊಂದಿಗೆ ಪ್ರಾರಂಭಿಸಿ, ಕವಿತೆ, ಸಣ್ಣಕತೆಗಳನ್ನು ಪ್ರಯತ್ನಿಸುವ ನಾವೆಲ್ಲ ಅನೇಕ ಲೇಖಕರಿಂದ ಸ್ಪೂರ್ತಿಗೊಂಡು ಹೊಸ ಹೊಸ ಪ್ರಕಾರಗಳಲ್ಲಿ ಕೈಯಾಡಿಸುತ್ತ ಕಲಿಯತೊಡಗುತ್ತೇವೆ. ಕಥೆಗಾರರು, ಕಾದಂಬರಿಕಾರರಾಗುವ ಕನಸಿರುವ ನಾವು ನಮಗೆ ಅರಿವಿಲ್ಲದೆಯೇ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಬರವಣಿಗೆಯ ತಪ್ಪುಗಳು, ಅಥವಾ ನಮ್ಮ ಗ್ರಹಿಕೆಗಳಲ್ಲಿ ಇರುವ ಮೂಢ ನಂಬಿಕೆಗಳು. ಪುಸ್ತಕವೊಂದನ್ನು ಬರೆಯುತ್ತ, ಒಂದು ಕಾದಂಬರಿಯ ರಚನೆ, ವಿನ್ಯಾಸಗಳ ಕುರಿತು ಅಧ್ಯಯನ ಮಾಡೋಣ ಎಂದುಕೊಂಡು ಹುಡುಕಿದಾಗ ಇದೊಂದು ಪುಸ್ತಕ ಸಿಕ್ಕಿತು. The…

Continue reading →