ಸುಳಿಗಾಳಿ

ನಿನಗಿನ್ನೂ ನೆನಪಿದೆಯೇ, ಪಶ್ಚಿಮರಶ್ಮಿ ಸುರಿದಿದ್ದ ನೀಲಗಿರಿಗಳ ದಾರಿಯಲ್ಲಿ ನಡೆಯುತ್ತಿದ್ದ ನಾವು ಒಮ್ಮೆಲೇ ನಿಂತರೆ, ಇದ್ದಕ್ಕಿದ್ದಂತೆ ಎದ್ದ ಸುಳಿಗಾಳಿಯೊಂದು ನಮ್ಮೆದುರೇ ದಾಟಿ ಹೋಗಿದ್ದು? ಎರೆಡು ಹೆಜ್ಜೆಗಳು ಮುಂದಿಟ್ಟಿದ್ದರೆ ನಮ್ಮನ್ನೂ ಸುತ್ತಿಸಿಕೊಂಡು ಹೋಗುತ್ತಿತ್ತು ಎಂದು ನಕ್ಕಿದ್ದು? ಸುಳಿಗಾಳಿ ಹೀಗೆ ಸುಳಿವಾಗ ಮಿಡತೆಗಳು ಸಿಡಿದೋಡುತ್ತವೆ, ಇರುವೆಗಳು ನೆಲವನ್ನಪ್ಪುತ್ತವೆ, ಎಲೆಗಳು ಪಟಪಟಿಸಿ, ಹಸಿರಲ್ಲಿ ಗವಿಯುತ್ತಿದ್ದ ಹುಲ್ಲು ಹೂಗಳ ಗಂಧ ಮೋಡಗಳ ಕಡೆ ಮುಖ ಮಾಡುತ್ತದೆ. ನೋಡನೋಡುತ್ತಲೇ, ಬಯಲ ಸುಳಿಗಾಳಿ ಬೇಲಿಯಂಚಿನಲ್ಲಿ ಮರೆಯಾಗುತ್ತದೆ. ಏನು ಗಾಳಿಯ ಈ ಅವತಾರ? ಏನು ಈ ಲೀಲೆ? ಒಮ್ಮೆಮ್ಮೆ…

Continue reading →

ನಿಶ್ಚಲ ತಾರೆ ನೀನು

ಎಲ್ಲ ಬೆಳಕು ಕಳೆದ ಮೇಲೂ ಉಳಿಯುವ ನಿಶ್ಚಲ ತಾರೆ ನೀನು, ನಿನ್ನ ಮರೆತು ಹೇಗಿರಲಿ ನಾನು. ಈ ನಿಶಿ ನಿರಾಮಯತೆಯಲ್ಲಿ ಎದೆ ಚಾಚಿದ ಕೈಗೆ ಸಿಕ್ಕಂತೆ, ಕಣ್ಣು ತುಂಬಿಸುವೆ ಜಲಧಿ ಎದ್ದಂತೆ. ಚಾಚಿದಷ್ಟು ದೂರ, ಇನ್ನು ದೂರ. ಇನ್ನೂ ಚಾಚುತ್ತೇನೆ, ಸಿಕ್ಕುಬಿಡುವೆಯೆಂಬ ಭಯದಲ್ಲಿ. ಇಲ್ಲಿದ್ದು ಎಲ್ಲೆಲ್ಲೂ ಅರಳುವೆ, ಸುರ ಸುರಭಿ ಘಮಘಮಿಸಿ. ನಾನು ಕೈ ಚಾಚುತ್ತಲೇ ಇರುತ್ತೇನೆ, ನೀನು ಸಿಗದಂತಿರು, ಈ ಹಂಬಲದಲ್ಲೆ ಸುಖವಿದೆ.

Continue reading →

ಪದ್ಮಪಾದ ಮತ್ತು ಬರಹಗಾರರ ಸ್ಪೂರ್ತಿಯ ರಹಸ್ಯ

ಸಾಹಿತಿಗಳು, ಕವಿಗಳು ತಮಗೆ ದೈವಿಕ ಸ್ಪೂರ್ತಿ ದೊರೆಯುತ್ತದೆ, ಹಾಗಾಗಿ ಶ್ರೇಷ್ಟವಾದದ್ದನ್ನು ರಚಿಸುತ್ತೇವೆ (ಹಾಗಾಗಿ ನಾವು ಶ್ರೇಷ್ಟರು?!) ಅನ್ನುತ್ತಾರೆ. ಇಲ್ಲ ಅಂತದ್ದೇನಿಲ್ಲ, ಎಲ್ಲಾ ರೀತಿಯ ಸೃಜನಶೀಲತೆಯೂ ಮನುಷ್ಯಪ್ರಯತ್ನದಿಂದ ಸಾಧ್ಯವಾಗುತ್ತದೆ – ಕತ್ತಿ ಮಸೆಯುವುದಕ್ಕೂ, ಕವಿತೆ ಹೊಸೆಯುವುದಕ್ಕೂ ಅಷ್ಟೇ ಚಾತುರ್ಯ ಬೇಕಾಗುತ್ತದೆ – ಅದು ಚಾತುರ್ಯ ಅಷ್ಟೇ ಅಂತ ಇತರರು ವಾದ ಮಾಡುತ್ತಾರೆ. ಆದರೆ ಅನೇಕ ವಿಜ್ಞಾನಿಗಳು, ಸಂಶೋಧಕರು ಕೂಡಾ ತಾವು ಪ್ರಯತ್ನದ ತುತ್ತತುದಿಯೇರಿಯೂ ಸಫಲತೆಯನ್ನು ಪಡೆಯದೇ ನಿಂತಿದ್ದಾಗ, ಯಾವುದೋ ಕೈ ತಮ್ಮನ್ನು ಹಿಡಿದೆತ್ತಿತು ಅನ್ನುವುದನ್ನು ಹೇಳಿದ್ದಾರೆ. ಸುಮ್ಮನೇ ಒಂದಷ್ಟು…

Continue reading →

ಬುದ್ಧಿವಂತರಾದವರು ತಮ್ಮ ಕಾರ್ಯದ ಫಲಿತಾಂಶದ ಕುರಿತು ಏಕೆ ಚಿಂತಿಸುವುದಿಲ್ಲ ಗೊತ್ತೇ?

Source: deviantart ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ। ತಸ್ಮಾದ್ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್॥ ॥೫೦॥ (ಅರ್ಥ – ಬುದ್ಧಿವಂತನಾದ ಪುರುಷನು ತನ್ನ ಕರ್ಮದಿಂದ ಹುಟ್ಟುವ ಪುಣ್ಯ ಮತ್ತು ಪಾಪಗಳೆರಡನ್ನೂ ತ್ಯಜಿಸುತ್ತಾನೆ ಮತ್ತು ಕೇವಲ ತನ್ನ ಕರ್ಮದಲ್ಲಿ ಮನಸ್ಸಿಡುತ್ತಾನೆ. ಈ ಕರ್ಮಕೌಶಲವೇ ಯೋಗ.) ಈ ಶ್ಲೋಕವನ್ನು ಬಹಳ ಸರಳ ಉದಾಹರಣೆಯಿಂದ ವಿವರಿಸಬೇಕೆಂದರೆ, ಕೆರೆ ನೀರಿನಲ್ಲಿ ಒಂದು ಕಲ್ಲು ಎಸೆದಾಗ ಅಲೆಗಳೇಳುತ್ತವೆ. ನಾವು ಕಲ್ಲಿನ ಗಾತ್ರ, ತೂಕ ಮತ್ತು ಎಸೆಯುವ ವೇಗವನ್ನು ನಿಯಂತ್ರಿಸಬಹುದೇ ಹೊರತೂ ಕಲ್ಲು ನೀರಿನಲ್ಲಿ ಬಿದ್ದ ನಂತರದಲ್ಲಿ…

Continue reading →

ನೀವೂ ನಾಯಕರಾಗಬೇಕೆ? ಇದೊಂದೇ ಸುಲಭ ಸೂತ್ರ ಸಾಕು

ನಾಯಕನಾಗುವುದು ಹೇಗೆ ಎಂಬುದು ಬಹುಶಃ ನಮ್ಮೆಲ್ಲರ ಪ್ರಶ್ನೆ. ನಾಯಕತ್ವ ಅನ್ನುವುದು ಸುಲಭವಲ್ಲ. ನಾಯಕನೆಂದರೆ ಕೇವಲ ರಾಜಕೀಯಕ್ಕೆ, ಆಫೀಸಿನ ಬಾಸ್ ಆಗುವುದಕ್ಕೆ ಸಂಬಂಧಿಸಿದ ವಿಷಯವಲ್ಲ, ಮನೆಯ ಯಜಮಾನನಾಗುವುದೂ ಒಂದು ಸವಾಲಿನ ಕೆಲಸವೇ. ಒಂದು ತಂಡಕ್ಕೆ ನಾಯಕನಾಗುವುದೆಂದರೆ – ಅಲ್ಲಿ ಅನೇಕ ಮನಸ್ಸುಗಳಿರುತ್ತವೆ, ಅನೇಕ ರೀತಿಯ ಆಲೋಚನೆಗಳಿರುತ್ತವೆ, ಅನೇಕ ರೀತಿಯ ಆಸೆ-ಆಕಾಂಕ್ಷೆಗಳಿರುತ್ತವೆ – ಅವುಗಳನ್ನೆಲ್ಲ ಹೇಗೆ ನಿಭಾಯಿಸಬೇಕು ಎನ್ನುವುದು ಬಹುಮುಖ್ಯ ಪ್ರಶ್ನೆ. ಅದಕ್ಕಾಗಿ ಹೊಸದೊಂದು ಮನಸ್ಥಿತಿಯನ್ನೇ ನಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಆದರೆ, ’ನಾಯಕನಾಗುವುದು ಹೇಗೆ’ ಅನ್ನುವುದು ಒಂದು ಅರ್ಥಹೀನ ಪ್ರಶ್ನೆ. ಏಕೆಂದರೆ, ನಾಯಕನಾಗುವುದು…

Continue reading →

ಬಚ್ಚಲು ಮನೆಯಲ್ಲಿಯೇ ಏಕೆ ಹೆಚ್ಚಿನ ಐಡಿಯಾಗಳು ಹೊಳೆಯುತ್ತವೆ?

ಮೈಮೇಲೆ ನೀರು ಸುರಿಯುತ್ತಿದ್ದರೆ, ಇದ್ದಕ್ಕಿದ್ದಂತೆ ಮನಸ್ಸಿನಲ್ಲೊಂದು ಶವರ್ ತೆರೆದುಕೊಂಡಂತೆ ಕಥಾ ಲಹರಿ ಬಿಚ್ಚಿಕೊಳ್ಳುತ್ತದೆ. ಎಷ್ಟುಹೊತ್ತು ಅಲ್ಲಿದ್ದೆವೋ, ಎಷ್ಟು ನೀರು ಅನ್ಯಮನಸ್ಕತೆಯಲ್ಲಿ ಸುರಿದುಕೊಂಡೆವೋ ಗೊತ್ತಾಗುವುದಿಲ್ಲ. ಕಥೆಗಾರರಿಗಷ್ಟೇ ಅಲ್ಲ, ಮನೆ ಕಟ್ಟುವವರಿಗೆ, ಸಾಫ್ಟ್‌ವೇರ್ ಕೋಡ್ ಬರೆಯುವವರಿಗೆ ಎಲ್ಲರಿಗೂ ಹೀಗೆ ಸ್ನಾನಗೃಹದಲ್ಲಿರುವಾಗಲೇ ಹೊಸ ಆಲೋಚನೆ ಹೊಳೆಯುತ್ತವೆ. ಇದಕ್ಕೆ ಒಂದಷ್ಟು ವೈಜ್ಞಾನಿಕ ಕಾರಣಗಳನ್ನು ಹುಡುಕುವುದು ಮತ್ತು ನಾವೇ ಹೊಸ ಐಡಿಯಾಗಳು ಹುಟ್ಟುವಂತಹ ಸ್ಥಿತಿಯನ್ನು ನಿರ್ಮಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. ಬಚ್ಚಲು ಮನೆ ಸೇರುತ್ತಿದ್ದಂತೆ ಹೀಗೆ ಐಡಿಯಾಗಳು ಯಾಕೆ ಬರುತ್ತವೆ ಅನ್ನುವುದಕ್ಕೆ…

Continue reading →

ನಿಮ್ಮ ಬ್ಲಾಗ್ ಬರವಣಿಗೆ ವಿಚಾರದಲ್ಲಿ ನೀವೂ ಈ ತಪ್ಪು ಮಾಡಿದ್ದೀರಾ?

Teaching is the best way of learning ಅನ್ನುತ್ತಾರೆ. ಒಂದು ನಿರ್ದಿಷ್ಟ ಕ್ಷೇತ್ರದ ಕುರಿತು ನೀವು ಅಧ್ಯಯನ ಮಾಡಿ, ಬರೆಯಲು ಪ್ರಾರಂಭಿಸಿದಾಗ ನೀವು ನೂರಾರು ಜನರಿಗೆ ಆ ಕ್ಷೇತ್ರದ ಕುರಿತು ಕಲಿಸುತ್ತೀರಿ, ಅದಕ್ಕಿಂತ ಹೆಚ್ಚಾಗಿ ನೀವು ಕ್ಷೇತ್ರದಲ್ಲಿ ಪರಿಣತರಾಗುತ್ತೀರಿ.

Continue reading →

ತೋಳಗಳು ಬದಲಿಸಿದವು ನದಿಯ ಪಥವ

ಆಹಾರ ಸರಪಳಿ ಎಷ್ಟು ಸೂಕ್ಷ್ಮವಾಗಿ ಜೋಡಣೆಯಾಗಿದೆಯೆಂದರೆ, ಒಂದು ಕೊಂಡಿ ಬಿಚ್ಚಿಕೊಂಡರೂ, ಇಡೀ ವ್ಯವಸ್ಥೆಯ ಸ್ವರೂಪವೇ ಬದಲಾಗಿಬಿಡುತ್ತದೆ. ಅದು ಎಷ್ಟರ ಮಟ್ಟಿಗೆ ಬದಲಾಗುತ್ತದೆ ಎಂದರೆ ತೋಳಗಳು ನದಿಯ ದಿಕ್ಕನ್ನು ಬದಲಿಸುವಷ್ಟು. ಹೌದು, ಇಂತಹದ್ದೊಂದು ವಿಶಿಷ್ಟ ಘಟನೆ ಸಂಭವಿಸಿದ್ದು, ಅಮೇರಿಕಾದ ಎಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕಿನಲ್ಲಿ. ತೋಳಗಳು ಹೇಗೆ ಒಂದು ಜೀವಜಾಲ ವ್ಯವಸ್ಥೆಯಷ್ಟೇ ಅಲ್ಲದೇ ಭೌಗೋಳಿಕ ರೂಪಾಂತರಕ್ಕೂ ನಾಂದಿ ಹಾಡಿದವು ಎಂಬುದು ಒಂದು ರೋಚಕ ಘಟನೆ.

Continue reading →