ಕಾಡಿನಲ್ಲಿ ನಡೆದುಹೋದ..

> ಈ ನದಿ ದಡದಲ್ಲಿ ಇನ್ನೂ ಬಿಸಿಯಿದೆ ಮರಳುಆಶ್ರಮದಲ್ಲಿ ಉರಿಯ ಬೆಳಕು, ಸುತ್ತ ಹರಡುತ್ತಿದೆ ಕತ್ತಲು.ಗುರುದೇವ ವಿಶ್ರಾಂತಿಯಲ್ಲಿ, ಪೂರ್ವದಲ್ಲಿ ಏರುತ್ತಿದ್ದಾನೆ ಚಂದಿರ.ಹೊಳೆಯುತ್ತಿವೆ ತಾರೆಗಳು, ವಿಹರಿಸುತ್ತಿದ್ದಾಳೆ ನದಿತಾಯಿ.ಬೆಚ್ಚಗೆ ಬೀಸುವ ಗಾಳಿಯಲ್ಲಿ ನಾವಿಬ್ಬರು ಕುಳಿತಿದ್ದೇವೆ… ಹೊತ್ತು ಮುಳುಗುವ ಮೊದಲಷ್ಟೇ ಹೇಳಿದ್ದರು ಗುರುದೇವ,“ಕಾಡಿನಲ್ಲಿ ನಡೆದುಹೋದ ಶ್ವೇತಕೇತು ಕಳೆದುಹೋದ.” ಅವಳ ಮನಸಲೂ ಈಗ ಅದೇ ಕತೆಯಿರಬೇಕು,ತಾರೆಗಳನ್ನು ನೋಡುವ ಅವಳ ಮೊಗದಲ್ಲಿ ಮುಗುಳ್ನಗೆ.ನನಗಿಂತ ಚಿಕ್ಕವಳಿರಬೇಕು, ಆದರೂ ಅದು ಲೆಕ್ಕಾಚಾರವಲ್ಲ,ಗುರುವಿಗೆ ನಾವು ಶಿಷ್ಯಂದಿರು ಅಷ್ಟೆ! ಆಗಸದಲ್ಲಿ ಎರೆಡು ನಕ್ಷತ್ರಗಳು ಪ್ರಭೆತುಂಬಿ ಹೊಳೆಯುತ್ತಿವೆ.ಅತ್ತಲೇ ನೋಡುತ್ತಿರುವ ಅವಳಿಗೆ ಹೇಳುತ್ತೇನೆ:“ಗೋದಾವರೀ,…

Continue reading →

ವರ್ಡ್ಸ್‌ವರ್ಥ್ ಕಾವ್ಯ

ನಾನೇಕೆ ಮತ್ತೆ ಮತ್ತೆ ರೊಮ್ಯಾಂಟಿಕ್ ಅಥವಾ ರಮ್ಯ ಕಾವ್ಯಕ್ಕೆ ಮರಳುತ್ತೇನೆಂದರೆ, ಆ ಕಾವ್ಯದಲ್ಲಿ ಔಷಧೀಯ ಗುಣವಿದೆ ಮತ್ತು ಅದು ನನ್ನನ್ನು ಮತ್ತೆ ಪ್ರಕೃತಿಯೆಡೆಗೆ ಕರೆದೊಯ್ಯುತ್ತದೆ, ಪ್ರಾಕೃತಿಕ ಹಂಬಲವಾದ ಪ್ರೇಮವನ್ನೂ ಸೇರಿ. ನನಗಂತೂ ಓದು ಕಾವ್ಯದ ಓದು ಪ್ರಾರಂಭವಾದದ್ದೇ ರಮ್ಯ ಕಾವ್ಯದ ಓದಿನಿಂದ ಮತ್ತು ಕಾವ್ಯ ರುಚಿಸಿದ್ದು ಸಹಾ ರಮ್ಯ ಕಾವ್ಯದಿಂದಾಗಿಯೇ. ಅಂತಹ ರಮ್ಯಕಾವ್ಯದ ಅತ್ಯಂತ ಪ್ರಸಿದ್ಧ ಕವಿಯಾದ ವಿಲಿಯಮ್ ವರ್ಡ್ಸ್‌ವರ್ಥ್‌ನ ಕಾವ್ಯದ ಕುರಿತು ಬರೆಯುವುದರೊಂದಿಗೆ ನನ್ನ ಕಾವ್ಯದ ಕುರಿತ ಬರವಣಿಗೆಯನ್ನು ಆರಂಭಿಸಲು ಬಯಸುತ್ತೇನೆ. ಇದರಲ್ಲಿ ಒಂದು ಸ್ವಾರ್ಥವೂ…

Continue reading →

ಎಚ್ಚರಗೊಳ್ಳುವ ಸಮಯವಲ್ಲವೇ ಇದು?

>ಈ ಒಂದು ಬರಹವನ್ನು ಬರೆದಿಟ್ಟು ಸುಮಾರು ದಿನಗಳೇ ಆಗಿದ್ದವು. ಆದರೆ, ಇಂದಿನ ಸಂದರ್ಭದಲ್ಲಿ, ಅಂದರೆ ಮುಂಬೈಯಲ್ಲಿ ಭಯೋತ್ಪಾದಕರ ದಾಳಿ ಆದ ನಂತರದಲ್ಲಿ, ನಮ್ಮ ಹೃದಯದೊಳಗಿನ ನೋವು ಮತ್ತು ಚಿಂತನೆಗೆ ಇದು ಸ್ವಲ್ಪ ಅಪ್ರಸ್ತುತವಾಗುತ್ತದೆ. ಹೇಮಂತ ಕರ್ಕರೆ, ವಿಜಯ ಸಲಸ್ಕರ್, ಅಶೋಕ ಕಾಮಟೆ ಮತ್ತು ಸಂದೀಪ ಉನ್ನಿಕೃಷ್ಣನ್‌ರಂತಹ ವೀರ ಸೇನಾನಿಗಳು ನಮ್ಮನ್ನು ಅಗಲಿದ್ದಾರೆ. ದೇಶಕ್ಕೆ ದೇಶವೇ ದಿಕ್ಕುಗೆಟ್ಟು ಕುಳಿತಂತಹ ಸಂದರ್ಭವಿದು. ಜೊತೆಗೆ ನಮ್ಮ ರಾಜಕಾರಣಿಗಳ ಮೂರ್ಖತನ, ಭ್ರಷ್ಟತೆ, ಎಡಬಿಡಂಗಿ ಮಾತುಗಳು ಎಲ್ಲವೂ ಮತ್ತಷ್ಟು ಹತಾಶೆಗೀಡು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ…

Continue reading →

ಇದೆಲ್ಲ ಸಂಭ್ರಮದ ಅಭೀಪ್ಸೆ…

> ಆತ್ಮಗುಣಾಭಿಮಾನಿನಿ, ಹೀಗೆಂದು ಕರೆಯಲೇ ನಿನ್ನ? ಯಾವ ಒತ್ತಾಯಕ್ಕೂ ನೀನು ಒಲಿಯುವುದಿಲ್ಲ, ನಿನ್ನ ಹೃದಯದಲ್ಲಿ ಅರಳದಿರುವುದರ ಕುರಿತು ನೀನು ಮಾತೇ ಆಡುವುದಿಲ್ಲ. ಬೆಟ್ಟದಂಚಲ್ಲಿ ಕಾಡು ಮಲ್ಲಿಗೆಗಳರಳಿವೆ, ಕಂಪಿಗೆ ಸೋತು ಸುತ್ತುತ್ತೇನೆ, ಜೇನುಗಂಪು ಕಾಡಿನ ತುಂಬ ತುಂಬಿದೆ ಅಲೆಯುತ್ತೇನೆ… ಅಲ್ಲೆಲ್ಲೂ ನೀನು ಕಾಣುವುದಿಲ್ಲ. ಈ ಹುಡುಕಾಟವೆಲ್ಲ ಲೀಲೆಯಂತೆ, ಈ ಅಲೆದಾಟವೆಲ್ಲ ರೆಕ್ಕೆಬಿಚ್ಚಿ ಹಾರಿದಂತೆ. ಇದೆಲ್ಲ ಸಂಭ್ರಮದ ಅಭೀಪ್ಸೆ… ನನಗೆ ಗೊತ್ತು, ನೀನಿರುವುದು ನನ್ನಲ್ಲಿಯೇ ಎಂದು.

Continue reading →

ಬೆಟ್ಟಬನಗಳಲ್ಲಿ ಹುಡುಕುವಾಗ

> ಓರೆನೋಟ ಬೀರುವುದಿಲ್ಲ ಆಕೆ, ನೆಟ್ಟನೋಟ, ದಿಟ್ಟಮಾತು ಸಿಡಿಲುಬಂದು, ಮಳೆ ಸುರಿದು ಮತ್ತೆ ಶಾಂತ. ತೊಯ್ದವನ ಪಾಡು ಆಕೆಗೆ ಗೊತ್ತಾಗುವುದಿಲ್ಲ. ಬೇಸಿಗೆಯಲ್ಲಿ ಬೆಂದ ಭೂಮಿಯಿಂದ ಮೊದಲ ಮಳೆಗೆ ಮೇಲೆದ್ದ ಗಂಧ ದಿಕ್ಕುದಿಕ್ಕುಗಳಿಗೆ ಪಸರಿಸುವಾಗ ಆತ್ಮದ ಒಳಹೊಕ್ಕು ಹಸಿರಿಸುವಾಗ ಚೈತ್ರಗಂಧಿಗೀ ನಲಿವು ಗೊತ್ತಾಗುವುದಿಲ್ಲ. ಬೆಳ್ಳಿಗೆಜ್ಜೆಗೆ ಸೋತು ಬೆಟ್ಟಬನಗಳಲ್ಲಿ ಹುಡುಕುವಾಗ ಅಟ್ಟದಲೋ, ಕಟ್ಟೆಯಲೋ ಬರಿದೆ ಕುಳಿತಿರುತ್ತಾಳೆ.

Continue reading →

ಆಗಸವನ್ನೆಲ್ಲ ಬಿಳಿಮೋಡದಿಂದ ತುಂಬಿಸುತ್ತಾಳೆ

> ಆಗಸದಲ್ಲೊಂದು ಮೋಡಚಿಟ್ಟೆಯ ಆಕಾರ ತಳೆದುತೇಲುತ್ತ, ಹರಡುತ್ತಚದುರಿಹೋಗುತ್ತದೆ. ನೋಡುತ್ತಾಳೆ ಕಣ್ಣರಳಿಸಿ,ತೆರೆದುಕೊಳ್ಳುತ್ತದೆ ಬಾಲ್ಯ,ಹಸಿರು ದಾರಿಯಲ್ಲಿ ನಡೆದು,ಹೂಗಂಧ ಹರಡಿರುವಬಯಲಕಂಪಿಗೆ ದೀರ್ಘ ಉಸಿರೆಳೆದುಕೊಂಡಿದ್ದು..ಆಟವಾಡುವ ಚಿಟ್ಟೆಗಳ ಹಿಂದೆ ಓಡಿದ್ದು,ಅರಿಶಿಣಬಣ್ಣವೆಲ್ಲ ಚಿಟ್ಟೆಯಿಂದುದುರಿಕೈಗಳು ಬಣ್ಣಬಣ್ಣವಾಗಿದ್ದು.ಚಿಟ್ಟೆಯ ಚೈತನ್ಯ ತನ್ನೊಳಗೆ ಸೇರಿಆಕೆ ಚಿಟ್ಟೆಯೇ ಆಗಿ ಮನೆಗೆ ಮರಳಿದ್ದು. ನೆನೆಯುತ್ತಾಳೆ,ಚಿಟ್ಟೆಯೇ ಕೈಮೇಲೆ ಕುಳಿತಂತೆ ಪುಲಕಗೊಳ್ಳುತ್ತಾಳೆ. ಕಾಡಿನ ದಾರಿಯಲ್ಲಿ ಸಾಗುತ್ತೇನೆ,ಬೆಟ್ಟದಂಚಿನ ಮಲ್ಲಿಗೆ ಬನದಲ್ಲಿ ಚಿಟ್ಟೆಗಳ ಸಂತೆ,ಏನೋ ಮಾತು, ಏನೋ ಸಂಭ್ರಮ.ಕಲ್ಪಿಸಿಕೊಳ್ಳುತ್ತೇನೆ, ಆಕೆ ಇಲ್ಲಿ ನಡೆದಾಡಿದಂತೆ. ಮೋಡದ ತುಣುಕುಗಳೇ ಅರಳಿ ಆಗಸಕ್ಕೆ ಸೇರುವಂತೆಬೂರುಗ ಮರದ ಕಾಯಿಗಳಿಂದ ಅರಳುತ್ತಿದೆ ಅರಳೆ.ನೆಲಕ್ಕೆ ಬಿದ್ದ ಕಾಯನ್ನು ಎತ್ತಿಕೊಳ್ಳುತ್ತೇನೆ,ಅರಳೆಯನ್ನೆಳೆದು…

Continue reading →

ಓ ದೇವರೇ, ನಾನು ಯಾವ ಲೋಕದವನು?

>ನಿನ್ನ ಹೆಸರು ನನ್ನ ಹೃದಯದಲ್ಲಿ ಮೊಳಗುತ್ತನಿನ್ನ ಮಾತಿನ ನೆನಪುಗಳು ನನ್ನ ಕಿವಿಗಳಲ್ಲಿ ಕೇಳುತ್ತನಾಟ್ಯವಾಡುವ ನಿನ್ನ ಪದಾಘಾತಗಳು ನನ್ನೊಳಗೆ ಅಚ್ಚುಮೂಡಿಸುತ್ತನನ್ನ ಕಂಬನಿಗಳ ತುಂಬ ನಿನ್ನ ನೋಡುವ ಹಂಬಲವಿರುತ್ತನನ್ನ ಉಸಿರ ತುಂಬ ನೀನು ತುಂಬುತ್ತನಾನು ನೀನೇ ಆಗುವವರೆಗೂನೀನು ನನಗೆ ಕಾಣುವುದಿಲ್ಲವೇನು?“ನೀನೇ ಸತ್ಯವಾಗದೇ ನಿನಗೆ ಸತ್ಯ ಕಾಣುವುದಿಲ್ಲ”ಪ್ರೇಮಿಯೇ ಆಗದೇ ಪ್ರೇಮಿಸುವವಳು ಬರುವುದಿಲ್ಲ? -೨- ಮಾಗಿ ಕಾಲವೇಕೋ ಆಹ್ಲಾದಕರವೆನಿಸುತ್ತದೆ.ಬೆಟ್ಟದಾಚೆಯಿಂದ ಬೀಸಿ ಬರುತ್ತದೆ ಬಿರುಸಾದ ಗಾಳಿಒಣಗಿದೆಲೆಗಳ ಗಂಧ, ಉದುರಿ ತೇಲುವ ಸದ್ದು,ಮಂದವಾಗುತ್ತದೆ ಮಧ್ಯಾಹ್ನದ ಬಿಸಿಲು.ಸುತ್ತ ತೇಲುವ ಬಣ್ಣಗೆಟ್ಟ ಎಲೆಗಳ ಪರಿವಿಲ್ಲದೇತಮ್ಮಷ್ಟಕ್ಕೇ ಮೇಯುತ್ತಿರುತ್ತವೆ ದನಗಳು;ಕಟ್ಟಿಗೆ ಕಡಿಯುವವ…

Continue reading →

ಅಲ್ಲಿಯವರೆಗೂ ಕಾಯಬೇಕು..

>ಎಷ್ಟು ಹೊತ್ತು ಕುಳಿತಿರಲಿ, ಇನ್ನು ನನ್ನ ಗಾಳಕ್ಕೆ ಬೀಳುವುದೇ ಇಲ್ಲ ಮೀನು ಅನ್ನಿಸಿದ ಮೇಲೂ? ಏನನ್ನು ಬರೆಯುವುದು, ಯಾವ ಸಾಲುಗಳೂ ಬಳಿ ಬರುವುದಿಲ್ಲ ಅನ್ನಿಸುವಾಗಲೂ? ಕಡಲ ಕಿನ್ನರಿಯರೇ ಹೊತ್ತು ತರುವುದಿಲ್ಲವೇನು, ಸ್ಪೂರ್ತಿಯ ಅಮೃತಕುಂಭವನ್ನು? ಮುಂಜಾನೆಯೇ ನನ್ನ ನಿನ್ನ ನಡುವೆ ಈ ಗಾಢ ಗಂಭೀರ ಮೌನವೊಂದು ಎಳೆಬಿಸಿಲಂತೆ ಹರಡಿದೆ, ಎಲೆಯೊಂದು ಕಳಚಿ ಬೀಳುತ್ತ ಒಂದು ಮಾತಿನ ಸೇತುವೆ ಕಟ್ಟಲು ಪ್ರಯತ್ನಿಸಿದೆ. ಆದರೇನು, ಹಾರಿ ಹೋಗಿವೆ ಸಾಲು ಹಕ್ಕಿಗಳು, ಹೊತ್ತು ತರುವವರಿಲ್ಲ ಮಾತಿನ ಹೂವರಳುಗಳನ್ನ. ಬಂದುಬಿಡೇ ದಿವದ ದೀಪಾವಳಿಯಂತ ಮಳೆಬಿಲ್ಲೆ,…

Continue reading →

ಆಸೆಯನ್ನೂ ನಿರಾಸೆಯನ್ನೂ ಮೀರಿದ ಒಲವಾಗಿ…

> ಆತನ ಹೆಸರು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಹುಸೇನ್ ಅಂತ ಇರಬೇಕೇನೊ. ಅದು ನಾನು ಮೂರನೇ ತರಗತಿ ಓದುತ್ತಿದ್ದ ಸಮಯವೆನ್ನಿಸುತ್ತದೆ. ಆತನ ಬಳಿ ಒಂದು ಕಣ್ಣಿನಾಕಾರದ ಗಾಜಿನ ವಸ್ತುವಿತ್ತು. ಒಂದು ಕಡೆ ಚಪ್ಪಟೆಯಾಗಿ ಒಂದೇ ಸಮತಲವಿದ್ದು ಮತ್ತೊಂದು ಕಡೆ ವಿವಿಧ ದಿಕ್ಕುಗಳಿಗೆ ಸಮತಲ ಮುಖಗಳಿದ್ದ ವಜ್ರದಂತಹ ವಸ್ತು ಅದು. ಅದು ತನ್ನ ತಾಯಿಯ ಸರದ ಪದಕವೆಂದು ಆತ ಹೇಳಿದ್ದ. ಅದನ್ನು ಕಣ್ಣಿಗೆ ಹಿಡಿದುಕೊಂಡು ನೋಡಿದರೆ ಎದುರಿಗಿದ್ದ ಒಬ್ಬ ವ್ಯಕ್ತಿ ಭಿನ್ನ ಭಿನ್ನ ಬಣ್ಣಗಳ ಅನೇಕವಾಗಿ ತೋರಿಬರುತ್ತಿದ್ದ. ಕಿಟಕಿಯನ್ನೇ…

Continue reading →

ಮೋಡ ತನ್ನಷ್ಟಕ್ಕೇ ಕದಲುವುದಿಲ್ಲ..

> ಮೋಡ ತನ್ನಷ್ಟಕ್ಕೇ ಕದಲುವುದಿಲ್ಲ ಸೂರ್ಯರಶ್ಮಿಗಳನ್ನೂ ಕದಲಿಸುತ್ತದೆ ಮರದ ನೆರಳನ್ನೂ ಕದಲಿಸುತ್ತದೆ ನೆರಳನ್ನೇ ದಿಟ್ಟಿಸುತ್ತಿದ್ದವಳು ಕಣ್ಣನ್ನು ಕದಲಿಸುತ್ತಾಳೆ. ಎಲ್ಲಿ ಹೋಗಿತ್ತು ಮನಸ್ಸು ಒಂದು ಮುಗುಳ್ನಗೆಯೊಂದಿಗೆ ಮರಳಿ ಬಂತು. ನಿನ್ನೆಯೆಲ್ಲ ಉರಿವ ಬಿಸಿಲು, ಸಂಜೆಯ ಹೊತ್ತಿಗೆ ಚೆಂಡುಹೂಗಳ ಕಂಪು ಬೀಸಿ ಬರುತ್ತಿತ್ತು, ಬಲಿಯತೊಡಗಿವೆ ಬತ್ತದ ಕಾಳುಗಳು ಪೈರುಹಸಿರೆಲ್ಲ ಬಣ್ಣ ಬದಲಿಸುತ್ತಿದೆ, ಲಂಗವನ್ನೊದೆಯುತ್ತ ನಡೆದವಳ ಸುತ್ತ ಚಿಟ್ಟೆಗಳ ದಂಡು. ನೀಲಿಯಲ್ಲಿ ತೇಲುತ್ತಿದ್ದವು ಮೋಡಗಳು ಪಶ್ಚಿಮದಂಚಿನಲ್ಲಿ ಬಣ್ಣ ಚೆಲ್ಲಿತ್ತು. ಒಂದೊಂದೆ ಹೆಜ್ಜೆಯಿಡುತ್ತಿದ್ದಳು, ಕಣ್ಣರಳಿಸುತ್ತಿದ್ದಳು. ಯಾವುದೋ ಕಂಪು ಕರೆದಂತೆ, ಯಾವುದೋ ತಂಪು ತೆರೆದಂತೆ,…

Continue reading →