ಹೊಸತನದ ಹಾಡಾಗು ಮನವೆ

ಕೆತ್ತಿಕಲ್ಲುಗಳ ಕಲೆಯಾಗಿಸಿದವ, ಬಲೆಬೀಸಿದವ ಎದೆಯೊಳಗೆ ತುಂಬಿ ಚಿತ್ತಾರವ ಮರೆಯಾಗಿರುವ ಜೀವತಂತುಗಳ ಮಿಡಿವ, ಜೀವಂತ ತಾವೆಂದು ನುಡಿವ ಶಿಲೆಗಳಲ್ಲಿ ಬದುಕಾಗಿವೆ ನೋಡು, ಹೊಸ ಬೆಳಕಾಗಿವೆ. ಯಾವ ವೈಭವದ ಸಿರಿಯೊ, ನೆನಪಿನುಡುಗೊರೆಯೊ ಹೃದಯ ಮಂದಿರವನು ಬೆಳಗಿ, ಕಂಬನಿಯ ತರಿಸಿದೆ. ಜಡದಲ್ಲಿ ಚೇತನವು ಅಡಗಿ, ಹೊಸಭಾವ ಬೆಡಗಿ ಕಂಗಳಲಿ ತಾ ತುಂಬಿದೆ, ಪ್ರೀತಿಸುವವರನೆ ನಂಬಿದೆ. ಯಾವ ಬಯಕೆಯ ಪರಿಯೊ, ಹಿರಿಮೆ ಚಿನ್ನದ ಗರಿಯೊ ನಾಡಬೆಳಗುವ ನುಡಿಯೊ, ಭಕ್ತಿಭಾವದ ಕುಡಿಯೊ ಮುಡಿದ ಮಲ್ಲಿಗೆ ಮಾಲೆ, ಕಂಪುಸೂಸುವ ಲೀಲೆ ಅಲೆಅಲೆಯು ಎಲ್ಲೆಡೆಯೂ, ಅಂದವೀ ಕಲ್ಲುಗುಡಿಯು….

Continue reading →

ಬರಿಯ ಚಿಪ್ಪು

ನಾನೊಂದು ಬರಿದಾದ ಚಿಪ್ಪು ಬದುಕು ಮುತ್ತಾಗಿಸಲು ಶಕ್ತಿಕೊಡು ನೀನು ಶುಭದ ಕಡೆಗೆ ಸದಾ ತುಡಿತವಿರಲು ಮರಳ ಕಣವೀ ಹೃದಯ ಮುತ್ತಾಗಲಿ ಮಧುರಭಾವ ತುಂಬಿ ಹೊಳೆಯಲಿ. ಈ ನಿನ್ನ ಪ್ರಕೃತಿಯ ಚೆಲುವು ಈ ಸಂಜೆಯಲಿ ಹೊಂಬಣ್ಣ ತುಂಬಿರಲು ಒಲವು ಜ್ಞಾನಜ್ಯೋತಿಯ ತುಂಬು ಅದರಲೇ ಬಲವು ನಿನ್ನೊಲುಮೆ ಬಲವಿರಲು ಸಾಧನೆಯು ಹಲವು ಕಂಬನಿಗಳು ತುಂಬಿವೆ ಸರ್ವಶಕ್ತನೇ ನಿನಗೆ ಸಾಟಿಯಿಲ್ಲ, ಹಿರಿದಿಲ್ಲ ಜಗದಲಿ. ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡಲಿ ಅಂಧಕಾರವ ಕಳೆವ ರವಿಕಿರಣದಂತೆ ಕೃಪೆಯಿರಲಿ, ಬಾಳಪಯಣದಲಿ ಕೆಳಗೆ ಬೀಳುವ ಮುನ್ನ…

Continue reading →

ಬೆಳಗು

ಅರಿಯದೊಲವು ಚಿತ್ತವ ಬಳಸಿ ಬತ್ತಿದೆದೆಯಲಿ ಭಾವುಕತೆ ಬೆಳೆಸಿ ಕಣ್ಣಪರದೆ ಮೀರಿ ಬರುವ ಹನಿಗಳು   ಮೌನ ಲೋಕವ ತಾನಾಗಿ ಆಕ್ರಮಿಸಿ ಹೊಸ ಜಗವ ಕಿವಿಗಳಲಿ ತುಂಬಿಸಿ ಚಿಲಿಪಿಲಿಯ ನಾದ ಮಾಡುವ ಹಕ್ಕಿಗಳು   ಹೊಸ ಜನುಮ ಪಡೆದ ಸಂತಸದಿ ತನುಮನದಿ ಕಂಪನು ತಾ ಹೊಂದಿ ಭಾವಜೀವಿಯ ಸೆಳೆದುಕೊಳ್ವ ಹೂವುಗಳು   ಸೋನೆ ಸುರಿದು ಜಗದಿ ಹರಡಿ ತನುಮನದಿ ಕಂಪನು ತಾ ಹೊಂದಿ ಭಾವಜೀವಿಯ ಸೆಳೆದುಕೊಳ್ವ ಹೂವುಗಳು   ಹೊಳೆ ಹೊಳೆವ ಕಿರಣ ಜೋಡಿಸಿ ಹೊಸ ಬೆಳಕ ಜಗಕೆ…

Continue reading →

ನಿಮಗೆ ‘ಹಾಯ್ಕು’ ಗೊತ್ತು, ‘ಮಣಿಪದ್ಮ’ ಗೊತ್ತೇ?

ನೀವು ಸಾನೆಟ್ ಬಗ್ಗೆ ಕೇಳಿರುತ್ತೀರಿ, ಹಾಯ್ಕು ಓದಿರುತ್ತೀರಿ, ಆದರೆ ಇದೊಂದು ಹೊಸ ಪ್ರಕಾರದ ಕವಿತೆ, ಇದನ್ನು ನಾನು ‘ಮಣಿಪದ್ಮ’ ಎಂದು ಕರೆಯುತ್ತೇನೆ. ‘ಮಣಿಪದ್ಮ’ವನ್ನು “ಓಂ ಮಣಿಪದ್ಮೇ ಹಂ” ಎಂಬ ಬೌದ್ಧ ಮಂತ್ರದಿಂದ ಪಡೆದಿದ್ದೇನೆ. ಮಣಿಪದ್ಮ ಅಂದರೆ, ಪದ್ಮಪತ್ರದ ಮೇಲಿರುವ ಹನಿ. ತಾವರೆ ಎಲೆಯ ಮೇಲಿದ್ದೂ ತಾವರೆಗೆ ತಾಕದೇ ಇರುವ ಬಿಂದು. ಇದ್ದೂ ಇಲ್ಲದಂತೆ ಇರುವಂತಹುದು. ಈ ಮಣಿಪದ್ಮ ಎಂಬ ಪ್ರಕಾರದ ಕವಿತೆಯಲ್ಲಿ ಐದು ಸಾಲುಗಳಿದ್ದು, ಮೂರು ಮತ್ತು ಎರಡು ಸಾಲುಗಳ ಎರಡು ಪಂಕ್ತಿಗಳನ್ನು ಒಳಗೊಂಡಿರುತ್ತದೆ. ಎರಡನೆಯ ಪಂಕ್ತಿ…

Continue reading →

-ಮೇ-

ಮೇಹುಗಾಡಿನಲಿ ಅಲೆಯುವೀ ಮೇಕೆಗಳಿಗೆ ಮೇವೆಂದರೆ ಒಣಹುಲ್ಲು, ಮೇಯಿಸುವವನಿಗೆ ಉರಿಬಿಸಿಲು. ಮೌನವೇ ಮೇಲೆನ್ನುವವು ಕೆಂಪು ಹೂವು ಅರಳಿ. ಚದುರುತಿವೆ ಮೇಘಗಳು, ದಿಟ್ಟಿಸುವನು ಮೇಟಿಯವನು ಮೇದಿನಿಯ ಮೇಲುಸಿರು ಗಾಳಿಯಲ್ಲಿ. ಮಳೆಯಾಸೆಯ ಕೂಗು ಮೇಡುಗಳ ಮುಟ್ಟಿದೆ. ಗಾಳಿ ಗೂಳಿ ಮೇಲಾಟಕೆ ಬಿದ್ದಿವೆ ದರಕೆಲೆಗಳು ಸುಳಿದಾಳಿಗೆ ಎದ್ದಿವೆ, ಕರಿಮೋಡಗಳು ಮೇರೆ ಮೀರಿವೆ, ಮೇನೆಯೇರಿವೆ. ಮೇಳೈಸಲಿ, ಮೇಘನಾದವಾಗಲಿ ಮಳೆಸುರಿಯುವುದೆ ಮೇಳಗಾನ. ಹನಿಮಳೆಯೆ ಮೇಲೋಗರ ಹಸಿದ ಒಲವಿಗೆ ಮೇಳವಾಡೊ ಎದೆಗಳಿಗೆ ಬರುವುದೆಂದು ಆ ಘಳಿಗೆ?

Continue reading →

ಕಲ್ಗುಡಿ (ಕಾದಂಬರಿಯ ಕೆಲವು ಪುಟಗಳು)

ಎರಡನೇ ಭಾಗ – ಮಳೆಗಾಲ – ವರ್ಷ – – ಶ್ರಾವಣ –  ಕಲ್ಗುಡಿ ಒಂದು ರೀತಿಯಲ್ಲಿ ವಿಶೇಷವಾದ ಊರೇ ಎನ್ನಬೇಕು. ಅದಕ್ಕೆ ವಿಭಿನ್ನ ಆಯಾಮಗಳಿವೆ. ಅದು ಅನೇಕ ಪದರಗಳಲ್ಲಿ ಮುಚ್ಚಲ್ಪಟ್ಟ ಊರು. ಅಲ್ಲಿನ ಸಾಮಾನ್ಯ ಜನರಿಗೆ ಕಲ್ಗುಡಿ ಒಂದು ರೀತಿ ತೆರೆದುಕೊಂಡರೆ, ಅಲ್ಲಿನ ಮಾಂತ್ರಿಕರಿಗೆ ಅದು ಇನ್ನೊಂದು ರೀತಿಯಲ್ಲಿಯೇ ತೆರೆದುಕೊಳ್ಳುತ್ತದೆ. ಕಲ್ಗುಡಿಯ ಯಾವ ಆಯಾಮದಲ್ಲಿ ತಾಂತ್ರಿಕರಿದ್ದಾರೆ, ಅವಧೂತರಿದ್ದಾರೆ ಹೇಳುವುದು ಕಷ್ಟ. ಇಲ್ಲಿನ ಮಣ್ಣಿಗೂ ವಿಶೇಷ ಶಕ್ತಿಗಳಿವೆ ಎನ್ನುತ್ತಾರೆ. ಈ ಊರಿಗೆ ವಿಚಿತ್ರವಾದ ಇತಿಹಾಸವಿದೆ, ವೈವಿಧ್ಯಮಯವಾದ ಪುರಾಣ…

Continue reading →

ಕಲ್ಗುಡಿ ಕವಿತೆಗಳು – ೧

ನಿನಗೆ ಗೊತ್ತಿಲ್ಲ ಯಾವ ಮೂರ್ತಿಯನು ನಾನು ಕಾಡಿನಲ್ಲಿ ಕಳೆದು ಬಂದಿರುವೆನೆಂದು. ದುಃಖ ಬಂದಿದೆಯೆಂದು ದುಃಖಿಸುತ್ತೀಯ ಹೆಚ್ಚು ಹೆಚ್ಚಾಗಿ. ದುಃಖ ಶುದ್ಧಗೊಳಿಸುವ ಅಗ್ನಿ ಅದರೆದುರು ಮನಸು ಬಿಚ್ಚು. ಸುಖ ತೋರುತ್ತದೆ ನೂರು ದಾರಿಗಳನು ದುಃಖವೊಂದೆ ತೆರೆದೀತು ನಿನ್ನೊಳಗಿನ ಬಾಗಿಲನು. ಅದೋ ನೋಡು ಆ ಕಪ್ಪು ಕಲ್ಲುಗಳು ನನ್ನ ಎಡವಿಸಿ ಬೀಳಿಸಿದವು ಪ್ರತಿಬಾರಿಯೂ ಶಪಿಸಿದ್ದೆ, ಇಷ್ಟು ಎತ್ತರಕೆ ಬಂದು ನಿಂತ ಮೇಲೆ ಎದೆ ತುಂಬ ಪ್ರೇಮವಿದೆ. ಪ್ರತೀ ದುಃಖದಲೂ ಎಚ್ಚರವಿದೆ ಪ್ರತೀ ಸುಖದಲೂ ಮರೆವು. ಕಾಡಿನಲ್ಲಿ ಕಳೆದ ಮೂರ್ತಿ ಕಾಡಾಗಿದೆ…

Continue reading →

ಪ್ರಕೃತಿ ಪುತ್ರಿ (Lucy Gray by William Wordsworth)

ಇಂಗ್ಲೀಷ್ ಕವಿ ವಿಲಿಯಮ್ ವರ್ಡ್ಸ್‌ವರ್ಥ್‌ನ ಪ್ರಸಿದ್ಧ ಕವಿತೆಗಳಲ್ಲಿ ಒಂದಾದ ಲೂಸಿ ಗ್ರೇ ಕವಿತೆ ನಮ್ಮ ಹತ್ತನೇ ತರಗತಿಯ ಪಠ್ಯದಲ್ಲಿತ್ತು. ಆಗ ಅದನ್ನು ಅನುವಾದಿಸಿ ಕ್ಲಾಸಿನಲ್ಲಿ ಓದಿದ್ದ ಪಠ್ಯ ಇಲ್ಲಿದೆ. ಅನುವಾದದೊಂದಿಗೆ ಮೂಲ ಕವಿತೆಯನ್ನು ನೀಡಿದ್ದೇನೆ. ಜೊತೆಗೆ ಲೂಸಿ ಗ್ರೇ ಎಂಬ ಬಾಲೆಯ ದುರಂತ ಕಥೆಯನ್ನು ತೋರಿಸುವ ಎನಿಮೇಶನ್ ಯೂಟ್ಯೂಬ್ ವಿಡಿಯೋ ಸಹಾ ಇದೆ.. ಪ್ರಕೃತಿ ಪುತ್ರಿ ಅರಣ್ಯದಲಿ ನಿನಾದ, ಚಿಗುರಿನಲಿ ನವಗಾಯನ ತೇಲಿ ಬರುತಿದೆ ಆಗಾಗ ಮಲ್ಲಿಗೆಯ ಧ್ವನಿ ಏಕಾಂಗಿ ಮಗುವು ತಾನು ಉಲಿಯುತಿಹಳು ನಾ ನೋಡುತಿರೆ ಊಹೆಯ…

Continue reading →

ಹತ್ತುವರ್ಷಗಳ ಹಿಂದೆ…

ಮತ್ತೆ ಹಬ್ಬಗಳ ದಿಬ್ಬಣ ಶುರುವಾಗಿದೆ. ನಾಗ ಪಂಚಮಿ, ಗಣೇಶ ಚತುರ್ಥಿಗಳು ಮುಂದೆ ಸಾಗಿ, ದಸರೆ, ದೀಪಾವಳಿಗಳು ಹಿಂದೆಯೇ ಬರುತ್ತಿವೆ. ಈಗ ಕಳೆದ ಆರೆಂಟು ವರ್ಷಗಳ ಹಿಂದೆ ಈ ಹಬ್ಬಗಳ ಸಂಭ್ರಮದ ಜೊತೆಗೆ ಒಂದು ನಿರೀಕ್ಷೆಯಿತ್ತು, ಅದು ಶುಭಾಶಯ ಪತ್ರಗಳದ್ದು ಮತ್ತು ಅವುಗಳನ್ನು ಹೊತ್ತು ತರುವ ಅಂಚೆಯಣ್ಣನದ್ದು. ಹಬ್ಬದ ದಿನ ರಜೆಯಾದ್ದರಿಂದ ಹಿಂದಿನ ದಿನವೇ ಪೋಸ್ಟ್‌ಮನ್ ಗ್ರೀಟಿಂಗ್ ಕಾರ್ಡುಗಳನ್ನು ಹೊತ್ತು ತರುತ್ತಾನೆ ಎಂದು ಕಾಯುತ್ತಿದ್ದೆವು. ಐದು-ಹತ್ತು ರೂಪಾಯಿಗಳ ಗ್ರೀಟಿಂಗ್ ಕಾರ್ಡಿನಲ್ಲಿ ಮನೆಯವರೆಲ್ಲ ಹೆಸರನ್ನು ಬರೆದು, ಎಲ್ಲರಿಗೂ ಶುಭಾಶಯಗಳು ಎಂದು…

Continue reading →

ರೂಮಿ…

“ಈ ನದಿ ತನ್ನ ಹಿಂದೆ ಸಮುದ್ರವನ್ನೇ ಎಳೆದುಕೊಂಡು ಹೋಗುತ್ತಿದೆ”, ಎಂದು ಗುರುವೇ ತನ್ನ ಶಿಷ್ಯನ ಕುರಿತು ಹೇಳುತ್ತಾನೆ. ಆ ಗುರು ಅತ್ತರ್, ಮತ್ತು ಶಿಷ್ಯ ರೂಮಿ. ರೂಮಿ ಅತ್ಯಂತ ಪ್ರಸಿದ್ಧ ಹಾಗೂ ಮೆಚ್ಚಲ್ಪಟ್ಟ ಸೂಫಿ ಕವಿ. ಸೂಫಿಸಂ ಎಂದರೆ ಇಸ್ಲಾಂನ ಯೋಗಿಕ ಆಯಾಮೆವೆನ್ನುತ್ತಾರೆ. ಸೂಫಿ ಎಂದರೆ ಯೋಗಿ. ಅಂದರೆ ಸೂಫಿ ಸಂಪ್ರದಾಯದ ಮೂಲಕ ಭಗವತ್ತೆಯನ್ನು ಪಡೆದವನು ಎಂದು. ಇಸ್ಲಾಂ ಸಾವಿನ ನಂತರ ಸ್ವರ್ಗ ಎಂದು ಮಾತನಾಡಿದರೆ, ಸೂಫಿ ಬದುಕಿರುವಾಗಲೇ ಮುಕ್ತಿ ಅಥವಾ ದೈವ ಸಾಕ್ಷಾತ್ಕಾರ ಸಾಧ್ಯ ಎನ್ನುತ್ತದೆ….

Continue reading →