ಅವರು ತಂದೆಯ ಕುರಿತು ಮಾತನಾಡಿದ್ದರು…

“ಅವರು ಆಸ್ಪತ್ರೆಗೆ ಸೇರಿದ್ದರು. ನನಗೆ ಒಂದೇ ಅತಂಕವಿತ್ತು. ಅವರೇನಾದರೂ ಆತ್ಮಸಾಕ್ಷಾತ್ಕಾರವಾಗದೇ ಸತ್ತುಬಿಟ್ಟಿದ್ದರೆ? ಒಂದು ವೇಳೆ ಸತ್ತು ಬಿಟ್ಟಿದ್ದರೆ, ನಿಮಗೆಲ್ಲ ಒಂದು ವಿಶ್ವಾಸ ಕಳೆದು ಹೋಗುತ್ತಿತ್ತು. ಅವರಂತಹ ವ್ಯಕ್ತಿಯೇ ಸಂಬುದ್ಧತ್ವ ಪಡೆಯದೇ ಸತ್ತುಹೋಗಿದ್ದರೆ, ನಿಮ್ಮ ಕುರಿತು ನಾನು ನಿರಾಶನಾಗಬೇಕಾಗುತ್ತಿತ್ತು. ಏಕೆಂದರೆ ಅವರು ಅಂತಹ ವ್ಯಕ್ತಿಯಾಗಿದ್ದರು…   “ಅವರು ನನ್ನ ತಂದೆಯಾಗಿದ್ದರು ಅನ್ನುವ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಆದರೆ ಅವರು ಅಂತಹ ವ್ಯಕ್ತಿಯಾಗಿದ್ದರು. ಚಿಕ್ಕವನಿದ್ದಾಗ, ನಾನು ತುಂಬ ಉದ್ದ ತಲೆಗೂದಲನ್ನು ಬಿಟ್ಟಿರುತ್ತಿದ್ದೆ. ಅದು ನನ್ನ ತಂದೆಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲದೇ…

Continue reading →

ತುಮ್ ಇಕ್ ಗೋರಖ ದಂದಾ ಹೋ..

ಚಿಕ್ಕವನಿದ್ದಾಗ ಒಂದು ಕೀರ್ತನೆಯನ್ನು ಕೇಳಿದ್ದು ನೆನಪಿದೆ, ಅದು ಅಲ್ಲಮಪ್ರಭುವಿನ ಕುರಿತದ್ದು. ಸಿದ್ಧನಾದ ಪ್ರಭುದೇವರಿಗೆ ಒಮ್ಮೆ ದಾರಿಯಲ್ಲಿ ಹಠಯೋಗಿ ಗೋರಕ್ಷ ಸಿಗುತ್ತಾನೆ. ಆತ ಯೋಗ ಸಾಧನೆಯಿಂದ ತನ್ನ ದೇಹವನ್ನು ವಜ್ರಕಾಯವನ್ನಾಗಿ ಮಾಡಿಕೊಂಡಿರುತ್ತಾನೆ. ಅಲ್ಲಮಪ್ರಭು ಎದುರಾದಾಗ ಆತ ತನ್ನ ಸಾಧನೆಯ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸುತ್ತಾನೆ, ಒಂದು ದೊಡ್ಡ ಖಡ್ಗವನ್ನು ಅಲ್ಲಮಪ್ರಭುವಿಗೆ ಕೊಟ್ಟು ತನ್ನ ದೇಹದ ಮೇಲೆ ಪ್ರಹಾರ ಮಾಡುವಂತೆ ಹೇಳುತ್ತಾನೆ. ಪ್ರಭುದೇವರು ಆ ಖಡ್ಗವನ್ನೆತ್ತಿ ಅವನ ದೇಹಕ್ಕೆ ಹೊಡೆಯುತ್ತಾರೆ, ಮಿಂಚು ಏಳುತ್ತದೆ, ದೊಡ್ಡ ಶಬ್ದ ಉಂಟಾಗುತ್ತದೆ, ಆದರೆ ಗೋರಕ್ಷನಿಗೆ ಏನೂ…

Continue reading →

ನಾನು ನನ್ನೊಡನಿರುವ ಕಾಲ

> ಇದ್ದಬದ್ದ ಕೆಲಸಗಳನ್ನೆಲ್ಲ ತಡಬಡಾಯಿಸಿ ಮುಗಿಸಿ ಹಳದಿ-ಗೆಂಪು ಬಸ್ಸು ಹತ್ತಿ ಸೂರ್ಯ ಮನೆಗೆ ಹೊರಡುವ ಹೊತ್ತು, ನಾನೂ ಅಂತದ್ದೇ ಬಸ್ಸನ್ನೇರುತ್ತೇನೆ. ಏರು ಯವ್ವನವನ್ನು ಪಡೆದ ಸಂಭ್ರಮದಲ್ಲಿ ನೈಟ್‌ಔಟ್ ಅನ್ನುತ್ತಾ ಅಪ್ಪ ಅಮ್ಮಂದಿರಿಗೆ ಟಾಟಾ ಮಾಡಿ ಹದಿ-ಹರೆಯದ ನಕ್ಷತ್ರಗಳು ಬೆಳದಿಂಗಳ ಪಾರ್ಟಿಗೆ ಹೊರಡುತ್ತವೆ. ಅಲ್ಲಿ ಆಗಸದಲ್ಲಿ ನೈಟ್‌ಲೈಪ್ ತೆರೆದುಕೊಳ್ಳುವ ಹೊತ್ತಿಗೆ, ಇಲ್ಲಿ ನನ್ನ ಬಸ್ಸು ಸ್ಟಾಪು ಸ್ಟಾಪಿಗೆ ನಿಲ್ಲುತ್ತಾ ನಾನು ಇಳಿಯುವ ಸ್ಟಾಪಿನೆಡೆಗೆ ಹೊರಡುತ್ತದೆ. ಮುಂದೆ ಎಲ್ಲಿಗೆ ಹೋದರೆ ನನಗೇನು, ಆಗ ಅದು ನನ್ನ ಬಸ್ಸಾಗಿ ಉಳಿಯುವುದಿಲ್ಲ. ನನ್ನ…

Continue reading →