ಓ ದೇವರೇ, ನಾನು ಯಾವ ಲೋಕದವನು?

>ನಿನ್ನ ಹೆಸರು ನನ್ನ ಹೃದಯದಲ್ಲಿ ಮೊಳಗುತ್ತನಿನ್ನ ಮಾತಿನ ನೆನಪುಗಳು ನನ್ನ ಕಿವಿಗಳಲ್ಲಿ ಕೇಳುತ್ತನಾಟ್ಯವಾಡುವ ನಿನ್ನ ಪದಾಘಾತಗಳು ನನ್ನೊಳಗೆ ಅಚ್ಚುಮೂಡಿಸುತ್ತನನ್ನ ಕಂಬನಿಗಳ ತುಂಬ ನಿನ್ನ ನೋಡುವ ಹಂಬಲವಿರುತ್ತನನ್ನ ಉಸಿರ ತುಂಬ ನೀನು ತುಂಬುತ್ತನಾನು ನೀನೇ ಆಗುವವರೆಗೂನೀನು ನನಗೆ ಕಾಣುವುದಿಲ್ಲವೇನು?“ನೀನೇ ಸತ್ಯವಾಗದೇ ನಿನಗೆ ಸತ್ಯ ಕಾಣುವುದಿಲ್ಲ”ಪ್ರೇಮಿಯೇ ಆಗದೇ ಪ್ರೇಮಿಸುವವಳು ಬರುವುದಿಲ್ಲ? -೨- ಮಾಗಿ ಕಾಲವೇಕೋ ಆಹ್ಲಾದಕರವೆನಿಸುತ್ತದೆ.ಬೆಟ್ಟದಾಚೆಯಿಂದ ಬೀಸಿ ಬರುತ್ತದೆ ಬಿರುಸಾದ ಗಾಳಿಒಣಗಿದೆಲೆಗಳ ಗಂಧ, ಉದುರಿ ತೇಲುವ ಸದ್ದು,ಮಂದವಾಗುತ್ತದೆ ಮಧ್ಯಾಹ್ನದ ಬಿಸಿಲು.ಸುತ್ತ ತೇಲುವ ಬಣ್ಣಗೆಟ್ಟ ಎಲೆಗಳ ಪರಿವಿಲ್ಲದೇತಮ್ಮಷ್ಟಕ್ಕೇ ಮೇಯುತ್ತಿರುತ್ತವೆ ದನಗಳು;ಕಟ್ಟಿಗೆ ಕಡಿಯುವವ…

Continue reading →

ಅಲ್ಲಿಯವರೆಗೂ ಕಾಯಬೇಕು..

>ಎಷ್ಟು ಹೊತ್ತು ಕುಳಿತಿರಲಿ, ಇನ್ನು ನನ್ನ ಗಾಳಕ್ಕೆ ಬೀಳುವುದೇ ಇಲ್ಲ ಮೀನು ಅನ್ನಿಸಿದ ಮೇಲೂ? ಏನನ್ನು ಬರೆಯುವುದು, ಯಾವ ಸಾಲುಗಳೂ ಬಳಿ ಬರುವುದಿಲ್ಲ ಅನ್ನಿಸುವಾಗಲೂ? ಕಡಲ ಕಿನ್ನರಿಯರೇ ಹೊತ್ತು ತರುವುದಿಲ್ಲವೇನು, ಸ್ಪೂರ್ತಿಯ ಅಮೃತಕುಂಭವನ್ನು? ಮುಂಜಾನೆಯೇ ನನ್ನ ನಿನ್ನ ನಡುವೆ ಈ ಗಾಢ ಗಂಭೀರ ಮೌನವೊಂದು ಎಳೆಬಿಸಿಲಂತೆ ಹರಡಿದೆ, ಎಲೆಯೊಂದು ಕಳಚಿ ಬೀಳುತ್ತ ಒಂದು ಮಾತಿನ ಸೇತುವೆ ಕಟ್ಟಲು ಪ್ರಯತ್ನಿಸಿದೆ. ಆದರೇನು, ಹಾರಿ ಹೋಗಿವೆ ಸಾಲು ಹಕ್ಕಿಗಳು, ಹೊತ್ತು ತರುವವರಿಲ್ಲ ಮಾತಿನ ಹೂವರಳುಗಳನ್ನ. ಬಂದುಬಿಡೇ ದಿವದ ದೀಪಾವಳಿಯಂತ ಮಳೆಬಿಲ್ಲೆ,…

Continue reading →

ಆಸೆಯನ್ನೂ ನಿರಾಸೆಯನ್ನೂ ಮೀರಿದ ಒಲವಾಗಿ…

> ಆತನ ಹೆಸರು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಹುಸೇನ್ ಅಂತ ಇರಬೇಕೇನೊ. ಅದು ನಾನು ಮೂರನೇ ತರಗತಿ ಓದುತ್ತಿದ್ದ ಸಮಯವೆನ್ನಿಸುತ್ತದೆ. ಆತನ ಬಳಿ ಒಂದು ಕಣ್ಣಿನಾಕಾರದ ಗಾಜಿನ ವಸ್ತುವಿತ್ತು. ಒಂದು ಕಡೆ ಚಪ್ಪಟೆಯಾಗಿ ಒಂದೇ ಸಮತಲವಿದ್ದು ಮತ್ತೊಂದು ಕಡೆ ವಿವಿಧ ದಿಕ್ಕುಗಳಿಗೆ ಸಮತಲ ಮುಖಗಳಿದ್ದ ವಜ್ರದಂತಹ ವಸ್ತು ಅದು. ಅದು ತನ್ನ ತಾಯಿಯ ಸರದ ಪದಕವೆಂದು ಆತ ಹೇಳಿದ್ದ. ಅದನ್ನು ಕಣ್ಣಿಗೆ ಹಿಡಿದುಕೊಂಡು ನೋಡಿದರೆ ಎದುರಿಗಿದ್ದ ಒಬ್ಬ ವ್ಯಕ್ತಿ ಭಿನ್ನ ಭಿನ್ನ ಬಣ್ಣಗಳ ಅನೇಕವಾಗಿ ತೋರಿಬರುತ್ತಿದ್ದ. ಕಿಟಕಿಯನ್ನೇ…

Continue reading →

ಮೋಡ ತನ್ನಷ್ಟಕ್ಕೇ ಕದಲುವುದಿಲ್ಲ..

> ಮೋಡ ತನ್ನಷ್ಟಕ್ಕೇ ಕದಲುವುದಿಲ್ಲ ಸೂರ್ಯರಶ್ಮಿಗಳನ್ನೂ ಕದಲಿಸುತ್ತದೆ ಮರದ ನೆರಳನ್ನೂ ಕದಲಿಸುತ್ತದೆ ನೆರಳನ್ನೇ ದಿಟ್ಟಿಸುತ್ತಿದ್ದವಳು ಕಣ್ಣನ್ನು ಕದಲಿಸುತ್ತಾಳೆ. ಎಲ್ಲಿ ಹೋಗಿತ್ತು ಮನಸ್ಸು ಒಂದು ಮುಗುಳ್ನಗೆಯೊಂದಿಗೆ ಮರಳಿ ಬಂತು. ನಿನ್ನೆಯೆಲ್ಲ ಉರಿವ ಬಿಸಿಲು, ಸಂಜೆಯ ಹೊತ್ತಿಗೆ ಚೆಂಡುಹೂಗಳ ಕಂಪು ಬೀಸಿ ಬರುತ್ತಿತ್ತು, ಬಲಿಯತೊಡಗಿವೆ ಬತ್ತದ ಕಾಳುಗಳು ಪೈರುಹಸಿರೆಲ್ಲ ಬಣ್ಣ ಬದಲಿಸುತ್ತಿದೆ, ಲಂಗವನ್ನೊದೆಯುತ್ತ ನಡೆದವಳ ಸುತ್ತ ಚಿಟ್ಟೆಗಳ ದಂಡು. ನೀಲಿಯಲ್ಲಿ ತೇಲುತ್ತಿದ್ದವು ಮೋಡಗಳು ಪಶ್ಚಿಮದಂಚಿನಲ್ಲಿ ಬಣ್ಣ ಚೆಲ್ಲಿತ್ತು. ಒಂದೊಂದೆ ಹೆಜ್ಜೆಯಿಡುತ್ತಿದ್ದಳು, ಕಣ್ಣರಳಿಸುತ್ತಿದ್ದಳು. ಯಾವುದೋ ಕಂಪು ಕರೆದಂತೆ, ಯಾವುದೋ ತಂಪು ತೆರೆದಂತೆ,…

Continue reading →