-ಮೇ-

ಮೇಹುಗಾಡಿನಲಿ ಅಲೆಯುವೀ ಮೇಕೆಗಳಿಗೆ ಮೇವೆಂದರೆ ಒಣಹುಲ್ಲು, ಮೇಯಿಸುವವನಿಗೆ ಉರಿಬಿಸಿಲು. ಮೌನವೇ ಮೇಲೆನ್ನುವವು ಕೆಂಪು ಹೂವು ಅರಳಿ. ಚದುರುತಿವೆ ಮೇಘಗಳು, ದಿಟ್ಟಿಸುವನು ಮೇಟಿಯವನು ಮೇದಿನಿಯ ಮೇಲುಸಿರು ಗಾಳಿಯಲ್ಲಿ. ಮಳೆಯಾಸೆಯ ಕೂಗು ಮೇಡುಗಳ ಮುಟ್ಟಿದೆ. ಗಾಳಿ ಗೂಳಿ ಮೇಲಾಟಕೆ ಬಿದ್ದಿವೆ ದರಕೆಲೆಗಳು ಸುಳಿದಾಳಿಗೆ ಎದ್ದಿವೆ, ಕರಿಮೋಡಗಳು ಮೇರೆ ಮೀರಿವೆ, ಮೇನೆಯೇರಿವೆ. ಮೇಳೈಸಲಿ, ಮೇಘನಾದವಾಗಲಿ ಮಳೆಸುರಿಯುವುದೆ ಮೇಳಗಾನ. ಹನಿಮಳೆಯೆ ಮೇಲೋಗರ ಹಸಿದ ಒಲವಿಗೆ ಮೇಳವಾಡೊ ಎದೆಗಳಿಗೆ ಬರುವುದೆಂದು ಆ ಘಳಿಗೆ?

Continue reading →

ಪ್ರಕೃತಿ ಪುತ್ರಿ (Lucy Gray by William Wordsworth)

ಇಂಗ್ಲೀಷ್ ಕವಿ ವಿಲಿಯಮ್ ವರ್ಡ್ಸ್‌ವರ್ಥ್‌ನ ಪ್ರಸಿದ್ಧ ಕವಿತೆಗಳಲ್ಲಿ ಒಂದಾದ ಲೂಸಿ ಗ್ರೇ ಕವಿತೆ ನಮ್ಮ ಹತ್ತನೇ ತರಗತಿಯ ಪಠ್ಯದಲ್ಲಿತ್ತು. ಆಗ ಅದನ್ನು ಅನುವಾದಿಸಿ ಕ್ಲಾಸಿನಲ್ಲಿ ಓದಿದ್ದ ಪಠ್ಯ ಇಲ್ಲಿದೆ. ಅನುವಾದದೊಂದಿಗೆ ಮೂಲ ಕವಿತೆಯನ್ನು ನೀಡಿದ್ದೇನೆ. ಜೊತೆಗೆ ಲೂಸಿ ಗ್ರೇ ಎಂಬ ಬಾಲೆಯ ದುರಂತ ಕಥೆಯನ್ನು ತೋರಿಸುವ ಎನಿಮೇಶನ್ ಯೂಟ್ಯೂಬ್ ವಿಡಿಯೋ ಸಹಾ ಇದೆ.. ಪ್ರಕೃತಿ ಪುತ್ರಿ ಅರಣ್ಯದಲಿ ನಿನಾದ, ಚಿಗುರಿನಲಿ ನವಗಾಯನ ತೇಲಿ ಬರುತಿದೆ ಆಗಾಗ ಮಲ್ಲಿಗೆಯ ಧ್ವನಿ ಏಕಾಂಗಿ ಮಗುವು ತಾನು ಉಲಿಯುತಿಹಳು ನಾ ನೋಡುತಿರೆ ಊಹೆಯ…

Continue reading →

ಹತ್ತುವರ್ಷಗಳ ಹಿಂದೆ…

ಮತ್ತೆ ಹಬ್ಬಗಳ ದಿಬ್ಬಣ ಶುರುವಾಗಿದೆ. ನಾಗ ಪಂಚಮಿ, ಗಣೇಶ ಚತುರ್ಥಿಗಳು ಮುಂದೆ ಸಾಗಿ, ದಸರೆ, ದೀಪಾವಳಿಗಳು ಹಿಂದೆಯೇ ಬರುತ್ತಿವೆ. ಈಗ ಕಳೆದ ಆರೆಂಟು ವರ್ಷಗಳ ಹಿಂದೆ ಈ ಹಬ್ಬಗಳ ಸಂಭ್ರಮದ ಜೊತೆಗೆ ಒಂದು ನಿರೀಕ್ಷೆಯಿತ್ತು, ಅದು ಶುಭಾಶಯ ಪತ್ರಗಳದ್ದು ಮತ್ತು ಅವುಗಳನ್ನು ಹೊತ್ತು ತರುವ ಅಂಚೆಯಣ್ಣನದ್ದು. ಹಬ್ಬದ ದಿನ ರಜೆಯಾದ್ದರಿಂದ ಹಿಂದಿನ ದಿನವೇ ಪೋಸ್ಟ್‌ಮನ್ ಗ್ರೀಟಿಂಗ್ ಕಾರ್ಡುಗಳನ್ನು ಹೊತ್ತು ತರುತ್ತಾನೆ ಎಂದು ಕಾಯುತ್ತಿದ್ದೆವು. ಐದು-ಹತ್ತು ರೂಪಾಯಿಗಳ ಗ್ರೀಟಿಂಗ್ ಕಾರ್ಡಿನಲ್ಲಿ ಮನೆಯವರೆಲ್ಲ ಹೆಸರನ್ನು ಬರೆದು, ಎಲ್ಲರಿಗೂ ಶುಭಾಶಯಗಳು ಎಂದು…

Continue reading →

ರೂಮಿ…

“ಈ ನದಿ ತನ್ನ ಹಿಂದೆ ಸಮುದ್ರವನ್ನೇ ಎಳೆದುಕೊಂಡು ಹೋಗುತ್ತಿದೆ”, ಎಂದು ಗುರುವೇ ತನ್ನ ಶಿಷ್ಯನ ಕುರಿತು ಹೇಳುತ್ತಾನೆ. ಆ ಗುರು ಅತ್ತರ್, ಮತ್ತು ಶಿಷ್ಯ ರೂಮಿ. ರೂಮಿ ಅತ್ಯಂತ ಪ್ರಸಿದ್ಧ ಹಾಗೂ ಮೆಚ್ಚಲ್ಪಟ್ಟ ಸೂಫಿ ಕವಿ. ಸೂಫಿಸಂ ಎಂದರೆ ಇಸ್ಲಾಂನ ಯೋಗಿಕ ಆಯಾಮೆವೆನ್ನುತ್ತಾರೆ. ಸೂಫಿ ಎಂದರೆ ಯೋಗಿ. ಅಂದರೆ ಸೂಫಿ ಸಂಪ್ರದಾಯದ ಮೂಲಕ ಭಗವತ್ತೆಯನ್ನು ಪಡೆದವನು ಎಂದು. ಇಸ್ಲಾಂ ಸಾವಿನ ನಂತರ ಸ್ವರ್ಗ ಎಂದು ಮಾತನಾಡಿದರೆ, ಸೂಫಿ ಬದುಕಿರುವಾಗಲೇ ಮುಕ್ತಿ ಅಥವಾ ದೈವ ಸಾಕ್ಷಾತ್ಕಾರ ಸಾಧ್ಯ ಎನ್ನುತ್ತದೆ….

Continue reading →

ಹಾಯ್ಕುಗಳು

> ೧ ಈ ಚಳಿಯಲ್ಲಿಯೂ ಬಾಡಿದ್ದಾಳೆ ಬಯಲ ಹೂವಂತೆ ಕುಳಿತಿದ್ದಾಳೆ. ನಿಟ್ಟುಸಿರು ಬಿಸಿನೀರ ಬುಗ್ಗೆಯಂತೆ! ೨ ಎಷ್ಟು ಬಾರಿ ನೋಡಿಲ್ಲ ಅಂತಹ ಸುಂದರಿ ಅಂತೇನೂ ಅನ್ನಿಸಲಿಲ್ಲ ಪ್ರೀತಿ ಹುಟ್ಟುವವರೆಗೂ! ೩ ಅರ್ಧ ಮೆಟ್ಟಿಲಿಗೇ ದಣಿವಾಗಿದೆ ಕುಳಿತಲ್ಲಿಂದ ಗೋಪುರ ಮಾತ್ರ ಕಾಣುತ್ತಿದೆ ಹೃದಯದೊಳಗೆ ತಂಗಾಳಿ. ೪ ಕನ್ನಡಿಯಲ್ಲಿ ತನ್ನನ್ನಷ್ಟೇ ಅಲ್ಲ ತನ್ನ ನೋಡುವನನ್ನೂ ನೋಡಿಕೊಳ್ಳುತ್ತಾಳೆ ಸುಂದರಿಯಾಗುತ್ತಾಳೆ. ೫ ಎಲೆ ಬಿದ್ದು ತೇಲುತ್ತಿದೆ ಜೀವ ಹಿಡಿದಿಟ್ಟುಕೊಂಡಿತ್ತು ರೆಂಬೆಯಲ್ಲಿ ಈಗ ದೈವ ನಡೆಸಿದ ಕಡೆಗೆ. ೬ ಹಸಿ ಮೈಯಿ, ಹಸಿ ಮನಸು…

Continue reading →

ಚೈನೀ ಕವಿತೆಗಳು

ಚೈನೀ ಉಪಾಸಕ ಹುಯಿ-ಕೈ (Wu-men Hui-k’ai) ರಚಿಸಿದ ಕೆಲವು ಕೊಆನ್ಸ್ (koans) ಎಂದು ಕರೆಯಲ್ಪಡುವ ಪುಟ್ಟ ಕವಿತೆಗಳು ಇಲ್ಲಿವೆ. ಅತ್ಯಂತ ಶ್ರೇಷ್ಠಕಾಲ ವಸಂತದಲ್ಲಿ ಸಾವಿರಾರು ಹೂಗಳು, ಶರತ್ಕಾಲದಲ್ಲಿ ಚಂದಿರ ಬೇಸಿಗೆ ಕಾಲದಲ್ಲಿ ತಂಗಾಳಿ, ಚಳಿಗಾಲದಲ್ಲಿ ಮಂಜು. ಅನಗತ್ಯ ವಿಷಯಗಳಿಂದ ನಿಮ್ಮ ಮನಸ್ಸಿಗೆ ಮೋಡ ಕವಿದಿರದಿದ್ದರೆ, ಇದೇ ನಿಮ್ಮ ಜೀವನದ ಅತ್ಯಂತ ಶ್ರೇಷ್ಠಕಾಲ. ಒಂದು ಕ್ಷಣವೇ ಒಂದು ಕ್ಷಣವೇ ಅನಂತವಾಗಿದೆ; ಮತ್ತು ಅನಂತತೆ ಈ ಕ್ಷಣದಲ್ಲಿದೆ. ಯಾವಾಗ ನೀವು ಈ ಕ್ಷಣದ ಮೂಲಕ ನೋಡಬಲ್ಲಿರೋ, ನೀವು ದೃಷ್ಟಾರನ ಮೂಲಕವೇ…

Continue reading →

ಬಿಡಿ ಗುರುವೆ ಎಷ್ಟು ತುಂಬುವಿರಿ ಮದ್ಯ

> Image: www.hindu.com ಬಿಡಿ ಗುರುವೆ ಎಷ್ಟು ತುಂಬುವಿರಿ ಮದ್ಯ, ಮತ್ತೇರುವುದಿಲ್ಲ ಹಿಂಬಾಲಿಸಿದಷ್ಟು ದೂರ, ಅವನು ಹಠಮಾರಿ ಗೊಲ್ಲ. ಒಲಿಯದವನಿಗೆ ಸಿಗುವುದಿಲ್ಲ, ಒಲಿದೆನೆಂದವನಿಗೂ ಇಲ್ಲ, ಒಲವಾದವನಲ್ಲೆ ಅವನು, ಅವನು ಹಠಮಾರಿ ಗೊಲ್ಲ. ಈ ದಾರಿಗಳೆಲ್ಲ ಎಷ್ಟು ಮುಗ್ಧ, ದಾರಿತಪ್ಪಿದರೂ ಅರಿವಾಗುವುದಿಲ್ಲ “ನೂರು ದಾರಿಗಳ ಮೊದಲು ನಿಂತವನು, ದೋರಗಾಯಿಯಾದವನು ದೂರವಾಗುವನು ನಾಮರೂಪಗಳಿಂದ, ಹಣ್ಣಾಗುವನು” ಈ ಹುಣ್ಣುನಾಲಿಗೆ ಕರೆ ಕೇಳದು, ಅವನು ಹಠಮಾರಿ ಗೊಲ್ಲ. “ಕಣ್ಣು ಕಾಣುವವರೆಗೆ ದಿಟ್ಟಿಸು, ಕಿವಿ ಕೇಳುವವರೆಗೆ ಆಲಿಸು, ಮನಃಕಂಪನದ ಒಂದು ಅಲೆಹಿಂದೆ ಭಗವಂತ ಬರುವನಂತೆ”…

Continue reading →

ಕತ್ತಲಲ್ಲಿ ದ್ವೈತವಿಲ್ಲ

> ಕತ್ತಲಿಲ್ಲದೇ ಬೆಳಕಿಲ್ಲ, ಅಪರಿಮಿತ ಕತ್ತಲಿಂದ ಹುಟ್ಟಿದಂತೆ ಬೆಳಕು ನನ್ನೆದೆಯ ನಿರಾಕಾರ ಪ್ರೇಮವೇ, ಸಾಕಾರರೂಪತಾಳುತ್ತದೆ, ನಿನ್ನ ಬಯಸುತ್ತದೆ. ಗಾಢ ಕತ್ತಲೆಯಂತ ನಿರಾಕಾರರೂಪಿ ಒಲವಲ್ಲಿಲ್ಲ ಬಯಕೆ, ಅದು ಪಡೆದು ತೃಪ್ತ. ಬೆಳಕೆಂದರೆ ವಿರಹ, ಮುಂಜಾನೆ ಹುಟ್ಟಿ, ಆಗಸಕ್ಕೇರಿ ಮೆಲ್ಲ ಸಂಜೆಗೆ, ಕತ್ತಲಿನ ಮಡಿಲಿಗೆ ಸೇರುತ್ತದೆ, ಕತ್ತಲಲ್ಲಿ ದ್ವೈತವಿಲ್ಲ.

Continue reading →

ಇಬ್ಬರು ಕವಿಗಳು ಮತ್ತು ಒಂದು ಶೋಕಗೀತೆ

‘ಅಡೋನೀಸ್’ ಒಂದು ಪ್ಯಾಸ್ಟೋರಲ್ ಎಲಿಜಿ (ಶೋಕಗೀತೆ). ಈ ಪ್ರಕಾರದ ಕಾವ್ಯವನ್ನು ಮೊದಲು ಗ್ರೀಕ್ ಮತ್ತು ರೋಮನ್ ಸಾಹಿತ್ಯದಲ್ಲಿ ಬರೆಯಲಾರಂಭಿಸಿದ್ದು, ಅದಕ್ಕೆ ನಿರ್ದಿಷ್ಟವಾದ ಛಂದಸ್ಸು ಬಳಕೆಯಲ್ಲಿತ್ತು. ಆದರೆ ಹದಿನಾರನೇ ಶತಮಾನದ ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಕಾರವನ್ನು ಬೇರೆಯ ರೀತಿಯಲ್ಲಿಯೇ ಬಳಸಿಕೊಂಡರು. ಇಲ್ಲಿ ಕಾವ್ಯದ ಛಂದಸ್ಸಿಗಿಂತ ಅದರ ವಿಷಯವೇ ಮುಖ್ಯವಾಗುತ್ತದೆ, ಅಂದರೆ ಈ ಕಾಲದಲ್ಲಿ ಎಲಿಜಿಗಳು ನೋವು ಮತ್ತು ಸಾವನ್ನೇ ವಿಷಯವನ್ನಾಗಿಸಿಕೊಂಡು ಬರೆಯಲ್ಪಡುತ್ತವೆ. ಈ ಪ್ರಕಾರದ ಕವಿತೆಗೆ ಅತ್ಯುತ್ತಮ ಉದಾಹರಣೆ ಎಂದರೆ ಥಾಮಸ್ ಗ್ರೇ ಕವಿ ೧೭೫೧ ರಲ್ಲಿ…

Continue reading →

ಕಾಡು ಮತ್ತು ಜನಸಂದಣಿ

> ಇದ್ದ ಹಕ್ಕಿಗಳೆಲ್ಲ ಹಾರಿ ಹೋದವು, ಈ ಬಯಲಿಗೆ ಬರುವ ಹೊತ್ತಿಗೆ ನಾನು ಮತ್ತೆ ಏಕಾಂಗಿ.. ಅದು ಎಂತಹ ನಿರಾಸೆಯೆಂಬುದು ಗೊತ್ತೇ ನಿಮಗೆ? ಮುಖ್ಯರಸ್ತೆಯಿಂದ ಬೇಲಿದಾಟಿ ಬಯಲು ಬೇಣಕ್ಕೆ ಹೆಜ್ಜೆಯಿಟ್ಟು ನಡೆಯುತ್ತಿದ್ದಂತೆಯೇ ಮೇಯುತ್ತಿದ್ದ ಹಕ್ಕಿಗಳೆಲ್ಲ ಪಕ್ಕನೇ ಹಾರಿ ದೂರ ಹೋಗಿಬಿಡುತ್ತವೆ. ಮತ್ತೆ ಬಯಲಲ್ಲಿ ಒಂಟಿತನ! ಕೆಲವು ದಿನಗಳ ಹಿಂದೆ, ಮೆಜೆಸ್ಟಿಕ್‌ನಿಂದ ಬಸ್ಸಲ್ಲಿ ಬಂದು ಮೇಯೋಹಾಲ್ ಹತ್ತಿರ ಇಳಿಯುತ್ತಿದ್ದ ಹಾಗೆಯೇ ಉಲ್ಲಸಿತನಾದೆ. ಸುತ್ತಮುತ್ತಲ ಮರಗಳ ಮೇಲೆ ಮಾಗಿ ಹೂಗಳ ರಾಶಿ. ದೀರ್ಘವಾಗಿ ಉಸಿರೆಳೆದುಕೊಂಡೆ. ಬೆಂಗಳೂರಿನಲ್ಲಿರುವ ದಿನಗಳಲ್ಲೆಲ್ಲ ಒಂದೇ ಅಸಹನೆ,…

Continue reading →