ನಿಶ್ಚಲ ತಾರೆ ನೀನು

ಎಲ್ಲ ಬೆಳಕು ಕಳೆದ ಮೇಲೂ ಉಳಿಯುವ ನಿಶ್ಚಲ ತಾರೆ ನೀನು, ನಿನ್ನ ಮರೆತು ಹೇಗಿರಲಿ ನಾನು. ಈ ನಿಶಿ ನಿರಾಮಯತೆಯಲ್ಲಿ ಎದೆ ಚಾಚಿದ ಕೈಗೆ ಸಿಕ್ಕಂತೆ, ಕಣ್ಣು ತುಂಬಿಸುವೆ ಜಲಧಿ ಎದ್ದಂತೆ. ಚಾಚಿದಷ್ಟು ದೂರ, ಇನ್ನು ದೂರ. ಇನ್ನೂ ಚಾಚುತ್ತೇನೆ, ಸಿಕ್ಕುಬಿಡುವೆಯೆಂಬ ಭಯದಲ್ಲಿ. ಇಲ್ಲಿದ್ದು ಎಲ್ಲೆಲ್ಲೂ ಅರಳುವೆ, ಸುರ ಸುರಭಿ ಘಮಘಮಿಸಿ. ನಾನು ಕೈ ಚಾಚುತ್ತಲೇ ಇರುತ್ತೇನೆ, ನೀನು ಸಿಗದಂತಿರು, ಈ ಹಂಬಲದಲ್ಲೆ ಸುಖವಿದೆ.

Continue reading →

ಓ ನಗೆಯೆ ನೀನೆಷ್ಟು ಚೆನ್ನ

ಓ ನಗೆಯೆ ನೀನೆಷ್ಟು ಚೆನ್ನ ಸುಧೆ ತುಂಬಿದ ಕಳಶವು ಚಿನ್ನ ನೀನು ಬೆಳದಿಂಗಳು, ತಂಗಾಳಿ ಹುಣ್ಣಿಮೆಯ ಸೊಬಗು, ಹೋಳಿ ನೀನಿರುವ ಮೊಗ ಕಾಮನಬಿಲ್ಲು ಏಕೆ ಓಡುವೆ ನೀನೊಮ್ಮೆ ನಿಲ್ಲು ಆಗಸವ ತುಂಬಿದಂತೆ ಬೆಳ್ಳಿ ಮೋಡ ಕಣ್ಣೆದುರೆ ನಿಂತಿರು, ಮತ್ತೆ ಓಡಬೇಡ ಹಸಿರಹುದು ಈ ಹೃದಯದಿ ನೀನಿರಲು ಬಯಸುವುದು ಸದಾ ಜೊತೆಗಿರಲು ಹೊರಹೋಗುವೆಯೆಂದು ಹೆದರಿದೆ ಮನ ಕೋಪದ ಬಿಸಿಯಲಿ ತಂಗಾಳಿಯಾಗು ದಿನಾ. (17-3-1999)

Continue reading →

ಶಿಶಿರಕರ್ಪೂರವುರಿಸಿ ವಸಂತಮಂಗಳಾರತಿ ಬೆಳಗುವ ಕಾಲ

ಹಸಿರು ಬೆಟ್ಟದ ಮೇಲೆ ಎಳೆಬಿಸಿಲು ಹಾಸಿದಂತೆ ಇವಳ ಮಂದಹಾಸ ತಿಳಿಗಾಳಿಯಂತಹ ಬೆಳಕು ಮೂಡುವಾಗ ತೆಳುವಲೆಗಳು ನದಿಯಲ್ಲಿ ಮೂಡುವಂತೆ ತಿಳಿದೇಳುವ ಮೊದಲು ನಿದ್ದೆಯಲಿ ಮಂದಹಾಸ ಉದಯನುದಯಿಸಿ ಬಗೆಯಲಿ ಅದರದಳಗಳನರಳಿಸುವಂತೆ ತೋರುವುದು ಶಿಶಿರಕರ್ಪೂರವುರಿಸಿ ವಸಂತಮಂಗಳಾರತಿ ಹಸಿರುದೇಗುಲವ ಬೆಳಗುವ ಕಾಲ.. ಕಣ್ಣು ಬಿಡುತ್ತಾಳೆ ಮೆಲ್ಲಗೆ, ಇಬ್ಬನಿ ಕರಗುವಂತೆ ರಾತ್ರಿ ಕಳೆದ ಪ್ರಕೃತಿ, ಮುಂಜಾನೆಗೆ ನೀಡಿದ ಹೊಸಜನ್ಮದಲಿ ಹೊಸಮಗುವಂತೆ ಕಣ್ಣರಳಿಸುತ್ತಾಳೆ.

Continue reading →

ಹಂಚಿಕೊಂಡ ಗುಟ್ಟು

ಒಂದು ದುಃಖದ ಗೀತೆಯನ್ನು ನನ್ನಷ್ಟಕ್ಕೆ ನಾನು ಹಾಡಿಕೊಳ್ಳುವ ಹೊತ್ತು ಸಂಜೆ ತನ್ನ ಮೌನ ಮುರಿಯಿತು, ಮುಗುಳ್ನಕ್ಕಿತು. ಗೀತೆ ದುಃಖವನ್ನೊ, ದುಃಖ ಗೀತೆಯನ್ನೊ ಎರಡೂ ಕರಗಿಹೋದವು. ಮೆಲ್ಲನೆ ಚಂದ್ರ ಮೂಡಿಬಂದ. “ಸಾವಿಲ್ಲ ಹೋಗು” “ದುಃಖಕ್ಕೇನು?”, ಆತಂಕದಿಂದ ಕೇಳಿದೆ, ಮುಗುಳ್ನಕ್ಕೆ. “ಅರ್ಥವಾದ ಮೇಲೆ ಹಠ ಮಾಡ ಬಾರದು, ಹೊರಡು” ಗಾಢ-ಗೂಢ ಗಾಳಿ ಬೀಸತೊಡಗಿತು. ಕಣ್ಣಲ್ಲಿ ಸಂಭ್ರಮವನ್ನು ಗುರುತಿಸಿದ ತಂಗಿ “ಏನು” ಅಂದಳು. ಇನ್ನಾರದೋ ಬಳಿ ಹಂಚಿಕೊಂಡ ಗುಟ್ಟು, ಆ ಲೋಕಕ್ಕೆ ನೀನಿನ್ನೂ ಬಂದಿಲ್ಲವಲ್ಲೇ ಕಂದ! “ಏನಿಲ್ಲ” ಅಂದೆ. ಮಾವಿನಮರವನ್ನು ವಸಂತ…

Continue reading →

ಸದ್ಯೋಪೂರ್ಣ

ಹಲ್ಲು ನಾಟಿಸಿ ಎರಡು ಹನಿ ತೊಟ್ಟಿಕ್ಕಿಸಿ ನನ್ನ ನೀಲಿ ಆಗಸವಾಗಿಸಿ ಹೋದೆ ಎಲ್ಲು ನಿಲ್ಲದ, ಎಲ್ಲು ಸಲ್ಲದ ಎಲ್ಲೆಯಿಲ್ಲದವನಾದೆ ಭದ್ರತೆಯ ಪ್ರಯತ್ನಗಳೆಲ್ಲ ಅಭದ್ರನಾಗಿಸಿವೆ ನನ್ನ. ಕಾಲಿಲ್ಲದ ನಿನ್ನ ಹೆಜ್ಜೆ ಗುರುತು ಅರಸುತ್ತ ಕಿವಿಯಿಲ್ಲದ ನಿನ್ನ ಅತ್ತು ಅತ್ತು ಕರೆಯುತ್ತ ಪೊದೆ ಸರಸರದಲ್ಲಿ, ಪೊರೆ ಉದುರಿದಲ್ಲಿ ಜೀವನ ಕರಗುತಿದೆ ನಿನ್ನ ಹುಡುಕುತ್ತ. ಗೂಬೆಗೊಂದು ಗೂಡು, ಬಾವಲಿಗೊಂದು ಕೋಡು ಆತ್ಮ ಆತುಕೊಳ್ಳದು ಎಲ್ಲೂ, ತನ್ನಲ್ಲೆ ಹೊರತೂ ತನಗೆ ತಾನೆ ಜೋತವ, ತನ್ನಲ್ಲೆ ನಿಂತವ ಮುಕ್ತ. ಇನ್ನೊಮ್ಮೆ ನಾಟಿಸು ಹಲ್ಲು, ಹೀರು…

Continue reading →

ಮಣಿಪದ್ಮ

ಬೆಟ್ಟದಡಿ ಅರಳಿವೆ ಕಾಡುಮಲ್ಲಿಗೆಗಳು ಪಾದಕೆ ತಾಕಿದರು ಪರಿವೆಯಿಲ್ಲ ಕಣಗಿಲೆ ಹುಡುಕಿ ಆಗಸದೆಡೆ ಕಣ್ಣು. ಯಾವ ಹೂವಿನಲ್ಲು ಇಲ್ಲದಿಲ್ಲ ಚೆನ್ನೆ ನಿನ್ನ ಚೆನ್ನಮಲ್ಲಿಕಾರ್ಜುನ ನಾನು. – ಮಣಿಪದ್ಮ ಅಂದರೇನು?

Continue reading →

ಹೊಸತನದ ಹಾಡಾಗು ಮನವೆ

ಕೆತ್ತಿಕಲ್ಲುಗಳ ಕಲೆಯಾಗಿಸಿದವ, ಬಲೆಬೀಸಿದವ ಎದೆಯೊಳಗೆ ತುಂಬಿ ಚಿತ್ತಾರವ ಮರೆಯಾಗಿರುವ ಜೀವತಂತುಗಳ ಮಿಡಿವ, ಜೀವಂತ ತಾವೆಂದು ನುಡಿವ ಶಿಲೆಗಳಲ್ಲಿ ಬದುಕಾಗಿವೆ ನೋಡು, ಹೊಸ ಬೆಳಕಾಗಿವೆ. ಯಾವ ವೈಭವದ ಸಿರಿಯೊ, ನೆನಪಿನುಡುಗೊರೆಯೊ ಹೃದಯ ಮಂದಿರವನು ಬೆಳಗಿ, ಕಂಬನಿಯ ತರಿಸಿದೆ. ಜಡದಲ್ಲಿ ಚೇತನವು ಅಡಗಿ, ಹೊಸಭಾವ ಬೆಡಗಿ ಕಂಗಳಲಿ ತಾ ತುಂಬಿದೆ, ಪ್ರೀತಿಸುವವರನೆ ನಂಬಿದೆ. ಯಾವ ಬಯಕೆಯ ಪರಿಯೊ, ಹಿರಿಮೆ ಚಿನ್ನದ ಗರಿಯೊ ನಾಡಬೆಳಗುವ ನುಡಿಯೊ, ಭಕ್ತಿಭಾವದ ಕುಡಿಯೊ ಮುಡಿದ ಮಲ್ಲಿಗೆ ಮಾಲೆ, ಕಂಪುಸೂಸುವ ಲೀಲೆ ಅಲೆಅಲೆಯು ಎಲ್ಲೆಡೆಯೂ, ಅಂದವೀ ಕಲ್ಲುಗುಡಿಯು….

Continue reading →

ಬರಿಯ ಚಿಪ್ಪು

ನಾನೊಂದು ಬರಿದಾದ ಚಿಪ್ಪು ಬದುಕು ಮುತ್ತಾಗಿಸಲು ಶಕ್ತಿಕೊಡು ನೀನು ಶುಭದ ಕಡೆಗೆ ಸದಾ ತುಡಿತವಿರಲು ಮರಳ ಕಣವೀ ಹೃದಯ ಮುತ್ತಾಗಲಿ ಮಧುರಭಾವ ತುಂಬಿ ಹೊಳೆಯಲಿ. ಈ ನಿನ್ನ ಪ್ರಕೃತಿಯ ಚೆಲುವು ಈ ಸಂಜೆಯಲಿ ಹೊಂಬಣ್ಣ ತುಂಬಿರಲು ಒಲವು ಜ್ಞಾನಜ್ಯೋತಿಯ ತುಂಬು ಅದರಲೇ ಬಲವು ನಿನ್ನೊಲುಮೆ ಬಲವಿರಲು ಸಾಧನೆಯು ಹಲವು ಕಂಬನಿಗಳು ತುಂಬಿವೆ ಸರ್ವಶಕ್ತನೇ ನಿನಗೆ ಸಾಟಿಯಿಲ್ಲ, ಹಿರಿದಿಲ್ಲ ಜಗದಲಿ. ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡಲಿ ಅಂಧಕಾರವ ಕಳೆವ ರವಿಕಿರಣದಂತೆ ಕೃಪೆಯಿರಲಿ, ಬಾಳಪಯಣದಲಿ ಕೆಳಗೆ ಬೀಳುವ ಮುನ್ನ…

Continue reading →

ಬೆಳಗು

ಅರಿಯದೊಲವು ಚಿತ್ತವ ಬಳಸಿ ಬತ್ತಿದೆದೆಯಲಿ ಭಾವುಕತೆ ಬೆಳೆಸಿ ಕಣ್ಣಪರದೆ ಮೀರಿ ಬರುವ ಹನಿಗಳು   ಮೌನ ಲೋಕವ ತಾನಾಗಿ ಆಕ್ರಮಿಸಿ ಹೊಸ ಜಗವ ಕಿವಿಗಳಲಿ ತುಂಬಿಸಿ ಚಿಲಿಪಿಲಿಯ ನಾದ ಮಾಡುವ ಹಕ್ಕಿಗಳು   ಹೊಸ ಜನುಮ ಪಡೆದ ಸಂತಸದಿ ತನುಮನದಿ ಕಂಪನು ತಾ ಹೊಂದಿ ಭಾವಜೀವಿಯ ಸೆಳೆದುಕೊಳ್ವ ಹೂವುಗಳು   ಸೋನೆ ಸುರಿದು ಜಗದಿ ಹರಡಿ ತನುಮನದಿ ಕಂಪನು ತಾ ಹೊಂದಿ ಭಾವಜೀವಿಯ ಸೆಳೆದುಕೊಳ್ವ ಹೂವುಗಳು   ಹೊಳೆ ಹೊಳೆವ ಕಿರಣ ಜೋಡಿಸಿ ಹೊಸ ಬೆಳಕ ಜಗಕೆ…

Continue reading →

ನಿಮಗೆ ‘ಹಾಯ್ಕು’ ಗೊತ್ತು, ‘ಮಣಿಪದ್ಮ’ ಗೊತ್ತೇ?

ನೀವು ಸಾನೆಟ್ ಬಗ್ಗೆ ಕೇಳಿರುತ್ತೀರಿ, ಹಾಯ್ಕು ಓದಿರುತ್ತೀರಿ, ಆದರೆ ಇದೊಂದು ಹೊಸ ಪ್ರಕಾರದ ಕವಿತೆ, ಇದನ್ನು ನಾನು ‘ಮಣಿಪದ್ಮ’ ಎಂದು ಕರೆಯುತ್ತೇನೆ. ‘ಮಣಿಪದ್ಮ’ವನ್ನು “ಓಂ ಮಣಿಪದ್ಮೇ ಹಂ” ಎಂಬ ಬೌದ್ಧ ಮಂತ್ರದಿಂದ ಪಡೆದಿದ್ದೇನೆ. ಮಣಿಪದ್ಮ ಅಂದರೆ, ಪದ್ಮಪತ್ರದ ಮೇಲಿರುವ ಹನಿ. ತಾವರೆ ಎಲೆಯ ಮೇಲಿದ್ದೂ ತಾವರೆಗೆ ತಾಕದೇ ಇರುವ ಬಿಂದು. ಇದ್ದೂ ಇಲ್ಲದಂತೆ ಇರುವಂತಹುದು. ಈ ಮಣಿಪದ್ಮ ಎಂಬ ಪ್ರಕಾರದ ಕವಿತೆಯಲ್ಲಿ ಐದು ಸಾಲುಗಳಿದ್ದು, ಮೂರು ಮತ್ತು ಎರಡು ಸಾಲುಗಳ ಎರಡು ಪಂಕ್ತಿಗಳನ್ನು ಒಳಗೊಂಡಿರುತ್ತದೆ. ಎರಡನೆಯ ಪಂಕ್ತಿ…

Continue reading →