“ಅಷ್ಟು ದೊಡ್ಡ ಮೊಲವೆ?”

ಅಮ್ಮ ಮೊರದಲ್ಲಿ ಅಕ್ಕಿಯಿಟ್ಟುಕೊಂಡು ಆರಿಸುತ್ತ ಕಟ್ಟೆಯ ಮೇಲೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಕುಳಿತು, ಲಂಗದಲ್ಲಿ ಸಣ್ಣ ಕಲ್ಲುಗಳನ್ನಿಟ್ಟುಕೊಂಡು ಒಂದೊಂದನ್ನೇ ಹಾರಿಸಿ ಹಿಡಿಯುತ್ತಾ ರಾಮನಿಗಾಗಿ ಕಾಯುತ್ತಿದ್ದಳು ಧನ್ಯಾ. ಅವಳು ಬರುವ ಹೊತ್ತಿಗೆ ಅವನು ಎಲ್ಲಿಗೋ ಹೋಗಿದ್ದ. ಹಿಂದಿನ ದಿನ ಇಬ್ಬರೂ ಹೋಗಿ ಹಳ್ಳದ ದಂಡೆಯ ಬಳಿ ಹರಡಿ ಬಿದ್ದಿದ್ದ ಬಿಳಿ ಕಲ್ಲು ಹರಳುಗಳನ್ನು ಆಯ್ದುಕೊಂಡು ಬಂದಿದ್ದರು. ಆಗಿನಿಂದ ಅವುಗಳನ್ನು ಧನ್ಯಾ ಒಮ್ಮೆಯೋ ಕೈಬಿಟ್ಟಿರಲಿಲ್ಲ. ಮಲಗುವಾಗಲೂ ತನ್ನ ಪುಟ್ಟ ದಿಂಬಿನ ಕೆಳಗೇ ಇಟ್ಟುಕೊಂಡು ಮಲಗಿದ್ದಳು. ರಾಮನೊಂದಿಗೆ ಎಲ್ಲಿಗಾದರೂ ಹೋಗಬಹುದು ಅನ್ನುವ…

Continue reading →

ಎರಡಲ್ಲ – ಕಥೆ

ಒಂದು ಮುಂಜಾನೆ ಆಟಕ್ಕೆಂದು ಹೋಗಿದ್ದ ರಾಮ, ಬರುವಾಗ ತನ್ನ ಜೊತೆ ಹಾವೊಂದನ್ನು ಕರೆದುಕೊಂಡು ಮನೆಗೆ ಬಂದ. ಮಗನ ದನಿ ಕೇಳಿ ಹೊರಗೆ ಬಂದ ಅಮ್ಮ ಬೆಚ್ಚಿಬಿದ್ದಳು. ಎರಡು ಮಾರು ಉದ್ದವಿರಬೇಕು, ಮಿರಿಮಿರಿ ಮಿಂಚುವ ಕರಿಮೈಯ ಹಾವು ಅದು. ಚೀರುತ್ತ ಒಳಗೆ ಓಡಿ ಬಂದದ್ದನ್ನು ನೋಡಿ ರಾಮನ ಅಪ್ಪ ಹೊರ ಬಂದರು. ಅಂಗಳದಲ್ಲಿ ರಾಮನ ಎತ್ತರಕ್ಕೆ ಹೆಡೆಯೆತ್ತಿಕೊಂಡು ನಿಂತ ಸರ್ಪದ ಕುತ್ತಿಗೆಯನ್ನು ಅವನ ಕೈ ಅವನಿಗರಿವಿಲ್ಲದಂತೆ ಸವರುತ್ತಿವೆ. ಹಿಂದೆ, ಬೇಲಿಯ ಗೇಟಿಗೆ ಒರಗಿಕೊಂಡು, ಚಡಪಡಿಕೆಯಲ್ಲಿ ನಿಂತಿದ್ದಾಳೆ ಧನ್ಯಾ. ಮುಂಜಾನೆಯೇ…

Continue reading →

ಕಲ್ಗುಡಿ (ಕಾದಂಬರಿಯ ಕೆಲವು ಪುಟಗಳು)

ಎರಡನೇ ಭಾಗ – ಮಳೆಗಾಲ – ವರ್ಷ – – ಶ್ರಾವಣ –  ಕಲ್ಗುಡಿ ಒಂದು ರೀತಿಯಲ್ಲಿ ವಿಶೇಷವಾದ ಊರೇ ಎನ್ನಬೇಕು. ಅದಕ್ಕೆ ವಿಭಿನ್ನ ಆಯಾಮಗಳಿವೆ. ಅದು ಅನೇಕ ಪದರಗಳಲ್ಲಿ ಮುಚ್ಚಲ್ಪಟ್ಟ ಊರು. ಅಲ್ಲಿನ ಸಾಮಾನ್ಯ ಜನರಿಗೆ ಕಲ್ಗುಡಿ ಒಂದು ರೀತಿ ತೆರೆದುಕೊಂಡರೆ, ಅಲ್ಲಿನ ಮಾಂತ್ರಿಕರಿಗೆ ಅದು ಇನ್ನೊಂದು ರೀತಿಯಲ್ಲಿಯೇ ತೆರೆದುಕೊಳ್ಳುತ್ತದೆ. ಕಲ್ಗುಡಿಯ ಯಾವ ಆಯಾಮದಲ್ಲಿ ತಾಂತ್ರಿಕರಿದ್ದಾರೆ, ಅವಧೂತರಿದ್ದಾರೆ ಹೇಳುವುದು ಕಷ್ಟ. ಇಲ್ಲಿನ ಮಣ್ಣಿಗೂ ವಿಶೇಷ ಶಕ್ತಿಗಳಿವೆ ಎನ್ನುತ್ತಾರೆ. ಈ ಊರಿಗೆ ವಿಚಿತ್ರವಾದ ಇತಿಹಾಸವಿದೆ, ವೈವಿಧ್ಯಮಯವಾದ ಪುರಾಣ…

Continue reading →

ಕಲ್ಗುಡಿ ಕವಿತೆಗಳು – ೧

ನಿನಗೆ ಗೊತ್ತಿಲ್ಲ ಯಾವ ಮೂರ್ತಿಯನು ನಾನು ಕಾಡಿನಲ್ಲಿ ಕಳೆದು ಬಂದಿರುವೆನೆಂದು. ದುಃಖ ಬಂದಿದೆಯೆಂದು ದುಃಖಿಸುತ್ತೀಯ ಹೆಚ್ಚು ಹೆಚ್ಚಾಗಿ. ದುಃಖ ಶುದ್ಧಗೊಳಿಸುವ ಅಗ್ನಿ ಅದರೆದುರು ಮನಸು ಬಿಚ್ಚು. ಸುಖ ತೋರುತ್ತದೆ ನೂರು ದಾರಿಗಳನು ದುಃಖವೊಂದೆ ತೆರೆದೀತು ನಿನ್ನೊಳಗಿನ ಬಾಗಿಲನು. ಅದೋ ನೋಡು ಆ ಕಪ್ಪು ಕಲ್ಲುಗಳು ನನ್ನ ಎಡವಿಸಿ ಬೀಳಿಸಿದವು ಪ್ರತಿಬಾರಿಯೂ ಶಪಿಸಿದ್ದೆ, ಇಷ್ಟು ಎತ್ತರಕೆ ಬಂದು ನಿಂತ ಮೇಲೆ ಎದೆ ತುಂಬ ಪ್ರೇಮವಿದೆ. ಪ್ರತೀ ದುಃಖದಲೂ ಎಚ್ಚರವಿದೆ ಪ್ರತೀ ಸುಖದಲೂ ಮರೆವು. ಕಾಡಿನಲ್ಲಿ ಕಳೆದ ಮೂರ್ತಿ ಕಾಡಾಗಿದೆ…

Continue reading →

ಕಾಗದದ ದೋಣಿ

>‘ನನ್ನ ನಿಮ್ಮ ನಡುವೆ ಏನು ಬಂಧವಿದೆ?’ ಎಂದು ಆಕೆ ಕೇಳಿದಳು.ಅದು ಬೆಳದಿಂಗಳ ಸಂಜೆ, ಮತ್ತು ನದಿ ತೀರದ ಮರಳು ಮುಂಜಾನೆಯ ಬಿಸಿಲಿಂದಾಗಿ ಇನ್ನೂ ಬೆಚ್ಚಗಿತ್ತು. ಮತ್ತೊಂದು ದಡದಲ್ಲಿ ಮನೆಯೊಳಗಿನ ದೀಪ ಬೆಳದಿಂಗಳನ್ನು ಮೀರಿಸಿ ಬೆಳಗುತ್ತಿತ್ತು. ಇಷ್ಟುಹೊತ್ತಿಗೆ ಗುರುಗಳು ಮಲಗಿರಬಹುದು, ಮತ್ತು, ಮನೆಗೆ ಹೋಗುವುದನ್ನು ಮರೆತು ನಾವಿಬ್ಬರೂ ಇಲ್ಲಿ ಕುಳಿತಿದ್ದೇವೆ.‘ಆಚೆ ದಡಕ್ಕೂ ಈಚೆ ದಡಕ್ಕೂ ಏನು ಸಂಬಂಧವಿದೆ?’ ಎಂದು ಕೇಳಿದೆ? ಆವಳು ಉತ್ತರ ಅರಿವಾಗದವಳಂತೆ ಮುಖವನ್ನೇ ನೋಡಿದಳು.‘ಎರೆಡೂ ದಡಗಳನ್ನು ನದಿ ಸೇರಿಸಿದೆ. ನದಿಯಿಲ್ಲದಿದ್ದರೆ, ಅವುಗಳು ಪರಸ್ಪರ ಅಪರಿಚಿತ. ನಾವೂ…

Continue reading →

ಬಯಲಿಗೊಂದು ಬೇಲಿ

‘ರಾಘೂ..’, ಎಂದು ಕರೆಯುತ್ತ ಹೊರಬಂದೆ. ಅಂಗಳದಲ್ಲಿ ಎಲ್ಲೂ ಇಲ್ಲ ಅವನು. ಕೊಯ್ಲು ಮುಗಿದ ಗದ್ದೆಯ ಹಾಳೆಯ ಬದುವಿನ ಮೇಲೆ ಹೆಜ್ಜೆಯಿಡುತ್ತ, ಅತ್ತ ಇತ್ತ ನೋಡುತ್ತ ಮತ್ತೆ ಕರೆದೆ, ‘ರಾಘೂ..’. ನಾನು ರಾಘವ. ಮತ್ತು ‘ರಾಘೂ’ ಅಂದರೂ ನಾನೇ. ಆದರೆ ರಾಘವನಿಗೀಗ ಇಪ್ಪತ್ತಮೂರು ವರ್ಷ ವಯಸ್ಸು ಮತ್ತು ರಾಘುಗೆ ಐದು. ಕಣ್ಣೆದುರಿಗಿನ ಗಿಡವೊಂದು ದಿನೇದಿನೇ ಬೆಳೆದು ದೊಡ್ಡ ಮರವಾದುದನ್ನು ನೋಡಿದಂತೆ, ನಾನು ನನ್ನನ್ನು ನೋಡಿಕೊಳ್ಳುತ್ತಲೇ ಬಾಲ್ಯದಿಂದ ಯವ್ವನಕ್ಕೆ ಏರಿಬಿಟ್ಟೆ. ಮೈಯೆಲ್ಲ ಮುಗ್ಧತೆ ಮತ್ತು ಅಚ್ಚರಿಯ ಹಸಿರು ತುಂಬಿದ ಸಸಿಯೊಂದು…

Continue reading →