ನಿಮಗೆ ‘ಹಾಯ್ಕು’ ಗೊತ್ತು, ‘ಮಣಿಪದ್ಮ’ ಗೊತ್ತೇ?

ನೀವು ಸಾನೆಟ್ ಬಗ್ಗೆ ಕೇಳಿರುತ್ತೀರಿ, ಹಾಯ್ಕು ಓದಿರುತ್ತೀರಿ, ಆದರೆ ಇದೊಂದು ಹೊಸ ಪ್ರಕಾರದ ಕವಿತೆ, ಇದನ್ನು ನಾನು ‘ಮಣಿಪದ್ಮ’ ಎಂದು ಕರೆಯುತ್ತೇನೆ. ‘ಮಣಿಪದ್ಮ’ವನ್ನು “ಓಂ ಮಣಿಪದ್ಮೇ ಹಂ” ಎಂಬ ಬೌದ್ಧ ಮಂತ್ರದಿಂದ ಪಡೆದಿದ್ದೇನೆ. ಮಣಿಪದ್ಮ ಅಂದರೆ, ಪದ್ಮಪತ್ರದ ಮೇಲಿರುವ ಹನಿ. ತಾವರೆ ಎಲೆಯ ಮೇಲಿದ್ದೂ ತಾವರೆಗೆ ತಾಕದೇ ಇರುವ ಬಿಂದು. ಇದ್ದೂ ಇಲ್ಲದಂತೆ ಇರುವಂತಹುದು. ಈ ಮಣಿಪದ್ಮ ಎಂಬ ಪ್ರಕಾರದ ಕವಿತೆಯಲ್ಲಿ ಐದು ಸಾಲುಗಳಿದ್ದು, ಮೂರು ಮತ್ತು ಎರಡು ಸಾಲುಗಳ ಎರಡು ಪಂಕ್ತಿಗಳನ್ನು ಒಳಗೊಂಡಿರುತ್ತದೆ. ಎರಡನೆಯ ಪಂಕ್ತಿ…

Continue reading →

ಕಾವ್ಯಾಭ್ಯಾಸಿಯ ಸಂಕಟಗಳು

ಎಷ್ಟು ದಿನಗಳಾಯಿತು ಪತ್ರ ಬರೆಯದೇ. ನಿನ್ನ ಕಾಲ ಅಲ್ಲಿ ಬೇಸಿಗೆಯ ನದಿಯಂತೆ ನಿರಾಳವಾಗಿ ಸಾಗುತ್ತಿದ್ದಿರಬೇಕು. ಇಲ್ಲಿ ಹಾಗಲ್ಲ, ಇಲ್ಲಿ ಕಾಲಕ್ಕೊಂದು ವಿಚಿತ್ರ ವೇಗವಿದೆ. ಕಾಲವೂ ಹೆಣ್ಣಿನ ಹಾಗೇ ಇರಬಹುದೇ, ಹಿಡಿಯಬಯಸಿದಷ್ಟು ತಪ್ಪಿಸಿಕೊಂಡು ಹೋಗುವ ರೀತಿಯಲ್ಲಿ? ಈ ಪಟ್ಟಣದಲ್ಲಿ ಎಲ್ಲರೂ ಕಾಲವನ್ನು ಹಿಡಿಯುವ ಸ್ಪರ್ಧೆಗೆ ಬಿದ್ದವರಂತೆ ಕಾಣುತ್ತಾರೆ. ಇಲ್ಲಿನ ಜನ ಮಾನಸ ಒಂದು ರೀತಿಯ ವೇಗವನ್ನು ಕಂಡುಕೊಂಡಿದೆ, ನನಗೆ ನಮ್ಮ ಹಳ್ಳಿನಲ್ಲಿದ್ದಾಗ ಈ ವೇಗದ ಅನುಭವ ಇರಲಿಲ್ಲ. ಬಹುಶಃ ನಮ್ಮ ಸುತ್ತಮುತ್ತಲಿನ ಜನರ ದಾವಂತ ನಮ್ಮನ್ನೂ ಹಿಡಿದುಕೊಳ್ಳುತ್ತದೆ. ನೀರು…

Continue reading →

ರಸ್ಕಿನ್ ಬಾಂಡ್ ಕುರಿತು..

>ಒಬ್ಬ ಲೇಖಕನ ಪುಸ್ತಕಗಳನ್ನು ಓದುತ್ತ ನಮಗೆ ಅವನ ಮನಸ್ಥಿತಿಯನ್ನು, ಆಲೋಚನೆಗಳನ್ನು, ಬದುಕಿನ ಕುರಿತಾದ ಧೋರಣೆಗಳನ್ನೆಲ್ಲ ತಿಳಿಯಬೇಕು ಅನ್ನುವ ಆಸಕ್ತಿ ಮೂಡುತ್ತದೆ. ಅವನ ಸಂಕಟ, ಅವನ ನಲಿವು ಮತ್ತು ಅವನ ಹಠ ಹೀಗೆ ಅವನ ಭಾವನೆಗಳು ನಮ್ಮಲ್ಲಿ ಆಗಾಗ ಮಿಂಚಿನ ಬೆಳಕು ಮೂಡಿಸುತ್ತ ಆಶಾಭಾವವನ್ನು ತುಂಬುತ್ತವೆ, ನಮ್ಮವೇ ಆಗುತ್ತವೆ. ಆತನ ಕುರಿತು ಒಂದು ಸಹಾನುಭೂತಿ ನಮ್ಮಲ್ಲಿ ಮೂಡುತ್ತದೆ. (ಸಹಾನುಭೂತಿ ಅಂದರೆ ಅನುಕಂಪ, ದಯೆ (ಮೇಲಿನವನು ಕೆಳಗಿನವನ ಮೇಲೆ ತೋರುವ ಭಾವ ಅಲ್ಲವೇ ಇವು?) ಅಂತ ಶಬ್ದಕೋಶದಲ್ಲಿದೆ. ಆದರೆ ನಾನು…

Continue reading →