ಇನ್ನೂ ಬೆಳಕಿದೆ
ನಿನ್ನ ಕಂಗಳ ತಿಳಿ ಹೊಳಪಿನಿಂದ ಸೂಸಿ
ಈ ಸಂಜೆಯ ದಾರಿಯಲ್ಲಿ
ಒಂಟಿ ನಾನು ಹಿಂದಿರುಗುವಂತೆ
ಎದೆಯೊಳಗೊಂದು ಬೆಳಕು
ನಂದಾದೀಪ ನಿಶ್ಚಿಂತೆಯಿಂದ
ಉರಿಯುತ್ತಿದೆಯೆಂಬಂತೆ.
ಅರೆತೆರೆದ ಮುಂಬಾಗಿಲ ಬಳಿ ನಿಂತು
ಬೀರಿದ ನಿನ್ನ ಭರವಸೆಯ ನೋಟ
ಮನೆ ತಲುಪಿಸಿದೆ ಎನ್ನುವ ನಿಶ್ಚಿಂತೆಯಲ್ಲಿ ಹಿಂದಿರುಗುವಾಗ
ಬಂದ ದಾರಿಯಲ್ಲಿ ಬೆಳಕ ಸುರಿಯುತ್ತ ಬಂದೆವೋ
ಎಂಬಂತ ಬೆರಗು.
ಇನ್ನೂ ಬೆಳಕಿದೆ,
ಏಕೆಂದರೆ ಬೆಳಕೊಂದೇ ಇದೆ –
ಒಳ ಹೊರ ಎಂಬುದನು ಕಳೆದು,
ನೀನು ನಾನು ಎಂಬುದನು ಅಳಿದು –
ತಾನೇ ಎಲ್ಲವೂ ಎಂಬಂತೆ.
(ಆಗಷ್ಟ್ 22, 2018)