ಎಲ್ಲ ಬೆಳಕು ಕಳೆದ ಮೇಲೂ ಉಳಿಯುವ
ನಿಶ್ಚಲ ತಾರೆ ನೀನು,
ನಿನ್ನ ಮರೆತು ಹೇಗಿರಲಿ ನಾನು.
ಈ ನಿಶಿ ನಿರಾಮಯತೆಯಲ್ಲಿ
ಎದೆ ಚಾಚಿದ ಕೈಗೆ ಸಿಕ್ಕಂತೆ, ಕಣ್ಣು ತುಂಬಿಸುವೆ ಜಲಧಿ ಎದ್ದಂತೆ.
ಚಾಚಿದಷ್ಟು ದೂರ, ಇನ್ನು ದೂರ.
ಇನ್ನೂ ಚಾಚುತ್ತೇನೆ, ಸಿಕ್ಕುಬಿಡುವೆಯೆಂಬ ಭಯದಲ್ಲಿ.
ಇಲ್ಲಿದ್ದು ಎಲ್ಲೆಲ್ಲೂ ಅರಳುವೆ, ಸುರ ಸುರಭಿ ಘಮಘಮಿಸಿ.
ನಾನು ಕೈ ಚಾಚುತ್ತಲೇ ಇರುತ್ತೇನೆ,
ನೀನು ಸಿಗದಂತಿರು,
ಈ ಹಂಬಲದಲ್ಲೆ ಸುಖವಿದೆ.