ಮೊಬೈಲ್ ಬ್ರೌಸರ್‌ಗಳಲ್ಲಿ ಜಾಹೀರಾತು ಹಾವಳಿ ತಡೆಯಲು ಸುಲಭ ಮಾರ್ಗ ಇಲ್ಲಿದೆ

ಅಂತರಜಾಲದ ಬಳಕೆ ಹೆಚ್ಚಾದಂತೆ ಅದರಲ್ಲಿ ಜಾಹೀರಾತುಗಳ ಹಾವಳಿಯೂ ಹೆಚ್ಚಾಗಿದೆ. ಈಗ ಸ್ಮಾರ್ಟ್‌ಫೋನ್‌ಗಳು ಬೆಲೆ ಕಡಿಮೆಯಾಗಿ, ಪ್ರತಿಯೊಬ್ಬರೂ ಮೊಬೈಲ್ ಹೊಂದಿರುವುದರಿಂದ ಮತ್ತು ಸುಲಭವಾಗಿ ಇಂಟರ್ನೆಟ್ ಲಭ್ಯವಿರುವುದರಿಂದಾಗಿ ನಾವೆಲ್ಲ ಹೆಚ್ಚಾಗಿ ಮೊಬೈಲಿನಲ್ಲಿಯೇ ಬ್ರೌಸಿಂಗ್ ಮಾಡುತ್ತೇವೆ. ಅಂತರಜಾಲದಲ್ಲಿ ಸುದ್ದಿ, ಲೇಖನ, ಮಲ್ಟಿಮೀಡಿಯಾ ಮತ್ತು ಉಪಯುಕ್ತ ಮಾಹಿತಿಗಳಿಗಾಗಿ ಆಗಾಗ ಹುಡುಕಾಟ ಮಾಡುತ್ತೇವೆ.

ಹೀಗಾಗಿ ಅಂತರಜಾಲದ ತುಂಬ ಚಿತ್ರವಿಚಿತ್ರ ಜಾಹೀರಾತುಗಳು ತುಂಬಿಕೊಂಡು ನಮ್ಮ ಅಂತರಜಾಲ ಬಳಕೆಗೆ ಅಡ್ಡಿ ಮಾಡುತ್ತಿರುತ್ತವೆ. ಪಾಪ್‌ಅಪ್ (ಪುಟಕ್ಕೆ ಅಡ್ಡಬರುವ) ಜಾಹೀರಾತುಗಳು, ಸಬ್‌ಸ್ಕ್ರೈಬ್ ಮಾಡಿಕೊಳ್ಳಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಅನ್ನುವ ಜಾಹೀರಾತುಗಳು ಪುಟಗಳನ್ನು ಓದಲು ಬಿಡುವುದೇ ಇಲ್ಲ. ಹಾಗಿದ್ದರೆ ಈ ವೆಬ್ ಪುಟಗಳಲ್ಲಿ ಜಾಹೀರಾತುಗಳನ್ನು ಕಾಣದಿರುವಂತೆ ಮಾಡುವುದು ಹೇಗೆ?

ನಾವು ಅಂತರಜಾಲದಲ್ಲಿ ಹುಡುಕಾಟ ಮಾಡಲು ಬ್ರೌಸರ್‌ಗಳನ್ನು ಬಳಸುತ್ತೇವಲ್ಲವೇ. ಹೆಚ್ಚಿನ ಆಂಡ್ರಾಯ್ಡ್ ಫೋನುಗಳಲ್ಲಿ ಕ್ರೋಮ್ ಬ್ರೌಸರ್ ಡೀಫಾಲ್ಟ್ ಆಗಿ ಬಂದಿರುತ್ತದೆ. ಜೊತೆಗೆ, ಫೋನ್ ಮಾರುತ್ತಿರುವ ಸಂಸ್ಥೆ ಕೂಡಾ ತನ್ನದೇ ಆದ ಬ್ರೌಸರ್ ನೀಡಿರುತ್ತದೆ. ಈ ಬ್ರೌಸರ್‌ಗಳಲ್ಲಿ ವೆಬ್ ಪುಟಗಳನ್ನು ತೆರೆದಾಗ ಕಾಣಿಸಿಕೊಳ್ಳುವ ಹೆಚ್ಚಿನ ಜಾಹೀರಾತುಗಳು ಜಾವಾಸ್ಕ್ರಿಪ್ಟ್ (JavaScript) ಎಂಬ ಪ್ರೋಗ್ರಾಮಿಂಗ್ ಲಾಂಗ್ವೇಜ್‌ನಿಂದ ಮಾಡಲ್ಪಟ್ಟಿರುತ್ತವೆ. ಈ ಬ್ರೌಸರ್‌ಗಳಲ್ಲಿ ನೀವು ಜಾವಾಸ್ಕ್ರಿಪ್ಟ್ ಸಕ್ರಿಯ/ನಿಷ್ಕ್ರಿಯಗೊಳಿಸುವುದು ಸಾಧ್ಯವಿದೆ. ನಿಷ್ಕ್ರಿಯಗೊಳಿಸಿದಾಗ ಈ ಜಾಹೀರಾತುಗಳು ಕಾಣುವುದಿಲ್ಲ

ಸುಲಭ ಸೂತ್ರ: ಜಾವಾಸ್ಕ್ರಿಪ್ಟ್ ನಿಷ್ಕ್ರಿಯಗೊಳಿಸಲು ಹೀಗೆ ಮಾಡಿ – Settings-Content Settings-JavaScript-Disable.  

 

ಪ್ರಯೋಜನಗಳು:

  • ಒಮ್ಮೆ ನೀವು ಜಾವಾಸ್ಕ್ರಿಪ್ಟ್ ನಿಷ್ಕ್ರಿಯಗೊಳಿಸಿದರೆ ಆಗ ಆ ಎಲ್ಲ ಜಾಹೀರಾತುಗಳು ಮಾಯವಾಗಿ ವೆಬ್ ಪುಟ ಶುದ್ಧವಾಗುತ್ತದೆ.
  • ನಿಮ್ಮ ಮೊಬೈಲ್ ಡಾಟಾ ಬಹಳಷ್ಟು ಉಳಿತಾಯವಾಗುತ್ತದೆ.
  • ಜಾವಾಸ್ಕ್ರಿಪ್ಟ್ ನಿಷ್ಕ್ರಿಯಗೊಳಿಸಿದ ನಂತರ ಫೇಸ್‌ಬುಕ್ ಪುಟ ಬಹಳಷ್ಟು ಸರಳವಾಗುತ್ತದೆ.

ಆದರೆ, ಜಾವಾಸ್ಕ್ರಿಪ್ಟ್ ನಿಷ್ಕ್ರಿಯಗೊಳಿಸುವುದರಿಂದಾಗಿ ಕೆಲವು ವೆಬ್‌ಪುಟಗಳು, ವಿಡಿಯೋಗಳು ಕಾಣದಿರಬಹುದು. ಆದರೆ, ಅಂತಹ ಪುಟಗಳನ್ನು ನೋಡಲು ನೀವು ನಿಮ್ಮ ಇನ್ನೊಂದು ಬ್ರೌಸರ್ ಬಳಸಬಹುದು.

ಜಾವಾಸ್ಕ್ರಿಪ್ಟ್ ನಿಷ್ಕ್ರಿಯಗೊಳಿಸದೇ ವೆಬ್ ಪುಟಗಳನ್ನು ಸುಲಭವಾಗಿ ಓದಲು ರೀಡರ್ ಮೋಡ್ ಬಳಸಬಹುದು. ಆದರೆ, ಅದು ಕ್ರೋಮ್ ನಲ್ಲಿ ಲಭ್ಯವಿಲ್ಲ, ಫೈರ್ ಫಾಕ್ಸ್ ಬ್ರೌಸರ್ ಪ್ರಯತ್ನಿಸಿ ನೋಡಿ.

ಇನ್ನಷ್ಟು ಓದಲು:

  1. ಮೊಬೈಲ್ ಮೂಲಕ ಪುಸ್ತಕಗಳನ್ನು ಓದುವುದಕ್ಕಾಗಿ: ಅತ್ಯುತ್ತಮ ಇ-ರೀಡಿಂಗ್ ಅಪ್ಲಿಕೇಶನ್‌ಗಳು
  2. ಮೊಬೈಲಿನಲ್ಲಿ ನೋಟ್ಸ್ ಮಾಡಿಕೊಳ್ಳುವುದಕ್ಕಾಗಿ: ಮೂರು ಅಪ್ಲಿಕೇಶನ್‌ಗಳು

Leave a Reply

Your email address will not be published. Required fields are marked *