ನಾನೊಂದು ಬರಿದಾದ ಚಿಪ್ಪು
ಬದುಕು ಮುತ್ತಾಗಿಸಲು ಶಕ್ತಿಕೊಡು ನೀನು
ಶುಭದ ಕಡೆಗೆ ಸದಾ ತುಡಿತವಿರಲು
ಮರಳ ಕಣವೀ ಹೃದಯ ಮುತ್ತಾಗಲಿ
ಮಧುರಭಾವ ತುಂಬಿ ಹೊಳೆಯಲಿ.
ಈ ನಿನ್ನ ಪ್ರಕೃತಿಯ ಚೆಲುವು
ಈ ಸಂಜೆಯಲಿ ಹೊಂಬಣ್ಣ ತುಂಬಿರಲು ಒಲವು
ಜ್ಞಾನಜ್ಯೋತಿಯ ತುಂಬು ಅದರಲೇ ಬಲವು
ನಿನ್ನೊಲುಮೆ ಬಲವಿರಲು ಸಾಧನೆಯು ಹಲವು
ಕಂಬನಿಗಳು ತುಂಬಿವೆ ಸರ್ವಶಕ್ತನೇ
ನಿನಗೆ ಸಾಟಿಯಿಲ್ಲ, ಹಿರಿದಿಲ್ಲ ಜಗದಲಿ.
ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡಲಿ
ಅಂಧಕಾರವ ಕಳೆವ ರವಿಕಿರಣದಂತೆ
ಕೃಪೆಯಿರಲಿ, ಬಾಳಪಯಣದಲಿ
ಕೆಳಗೆ ಬೀಳುವ ಮುನ್ನ ಕಾಯಿ ಹಣ್ಣಾಗಲಿ
ಚಿಪ್ಪು ಒಡೆಯುವ ಮುನ್ನ ಮರಳು ಮುತ್ತಾಗಲಿ.