ಪ್ರಕೃತಿ ಪುತ್ರಿ (Lucy Gray by William Wordsworth)

ಇಂಗ್ಲೀಷ್ ಕವಿ ವಿಲಿಯಮ್ ವರ್ಡ್ಸ್‌ವರ್ಥ್‌ನ ಪ್ರಸಿದ್ಧ ಕವಿತೆಗಳಲ್ಲಿ ಒಂದಾದ ಲೂಸಿ ಗ್ರೇ ಕವಿತೆ ನಮ್ಮ ಹತ್ತನೇ ತರಗತಿಯ ಪಠ್ಯದಲ್ಲಿತ್ತು. ಆಗ ಅದನ್ನು ಅನುವಾದಿಸಿ ಕ್ಲಾಸಿನಲ್ಲಿ ಓದಿದ್ದ ಪಠ್ಯ ಇಲ್ಲಿದೆ. ಅನುವಾದದೊಂದಿಗೆ ಮೂಲ ಕವಿತೆಯನ್ನು ನೀಡಿದ್ದೇನೆ. ಜೊತೆಗೆ ಲೂಸಿ ಗ್ರೇ ಎಂಬ ಬಾಲೆಯ ದುರಂತ ಕಥೆಯನ್ನು ತೋರಿಸುವ ಎನಿಮೇಶನ್ ಯೂಟ್ಯೂಬ್ ವಿಡಿಯೋ ಸಹಾ ಇದೆ..

ಪ್ರಕೃತಿ ಪುತ್ರಿ

ಅರಣ್ಯದಲಿ ನಿನಾದ, ಚಿಗುರಿನಲಿ ನವಗಾಯನ
ತೇಲಿ ಬರುತಿದೆ ಆಗಾಗ ಮಲ್ಲಿಗೆಯ ಧ್ವನಿ
ಏಕಾಂಗಿ ಮಗುವು ತಾನು ಉಲಿಯುತಿಹಳು
ನಾ ನೋಡುತಿರೆ ಊಹೆಯ ಕಾಡಿನಲಿ ನಲಿಯುತ

ಜೊತೆಗಾರಿಲ್ಲ ಒಡನಾಡಿ ಘೋರ ಕಾಡಿನಲಿ
ನೆಲೆಸಿಹಳು ತಾನೋರ್ವಳೇ ಪಾಳು ಭೂಮಿಯಲಿ
ಮನೆಯಂಗಳದಿ ತಾನಾಡುತ ಬೆಳೆದಳು ಬಾಲೆ
ತೋಟದಲಿ ಹಬ್ಬಿದ ದುಂಡುಮಲ್ಲೆಯ ಬಳ್ಳಿಯಂತೆ.

ಹಸಿರಲಿ ಹೊಳೆಗಣ್ಣ ಮೊಲವನು ಅರಸಿದೆ
ಮುದ್ದಾದ ಮರಿ ಕುಣಿದಾಟವಾಡುತಲಿ
ಆದರೆ, ಗುಲಾಬಿಗೆನ್ನೆಯ ಗಿಳಿಬಾಲೆ
ಹುಡುಕೆ ಸಿಗಲಿಲ್ಲ, ಕಣ್ಣತ್ತ ಸುಳಿಯಲಿಲ್ಲ.

ಇಂದು ಚಂಡಮಾರುತದ ಸಂಭವವಿದೆ
ನೀನೀಗೆ ನಗರಕೆ ಹೋಗಿ ಬಾ ಮಗು
ಲಾಂದ್ರವೊಂದು ಕೈಲಿರಲಿ ಬೆಳಕಿಗೆಂದು
ನಗರದಿಂದ ನಿನ್ನ ತಾಯ ಕರೆದು ತಾ

ಸಂತಸದಿ ಅಪ್ಪ ಈಗಲೇ ತೆರಳುವೆನು
ಹಗಲಿನ್ನೂ ದೂರವಾಗಿಲ್ಲ ನೋಡು ಅಲ್ಲಿ
ಸೂರ್ಯ ಪಡುವಣವ ದಾಟಿಲ್ಲವಲ್ಲಿ
ಕತ್ತಲಲಿ ಎಲ್ಲೋ ಕಳೆದಿಹನು ಚಂದಿರ.

ಸೌದೆಯ ಸೇರಿಸುತಿರುವ ಪಿತನು
ಹೆಮ್ಮೆಯಲಿ ನೋಡಿದನು ಮಗಳೆಡೆಗೆ
ಕಣ್ಣೋಟಕೆ ಮರೆಯಾಗಿ ಅವಳು ಕಾಣದಿರಲು
ಕೈಜೋಡಿಸಿ ರವಿಗೆ ಗಗನವ ನೋಡಿದನು

ಜಿಗಿಜಿಗಿದು ಚಿಗರೆಯಂತೆ ಸಾಗುತಿಹಳು
ಪರ್ವತ ಸಾಲುಗಳ ನಡುವೆ ದಾರಿಯಲಿ
ಪಾದದಿಂದ ಮಂಜನು ಚದುರಿಸುತ
ಹೊಗೆಯಂತೆ ಅದು ಸುತ್ತ ಹಬ್ಬಿರಲು.

ಚಂಡಮಾರುತವು ಅಕಾಲಕ್ಕೆ ಅಡಿಯಿಡಲು
ಪಥವರಿಯದೇ ಚಡಪಡಿಸಿ ಮಲ್ಲಿಗೆ
ಅಲೆದಾಡಿ ಏರಿದಳೊಂದು ಬೆಟ್ಟವನು
ಆದರೆ ನಗರವದು ಕಾಣಲೇ ಇಲ್ಲ.

ಹತಭಾಗ್ಯ ಪೋಷಕರು ಇರುಳಿಡೀ ಅರಸಿ
ರೋಧಿಸುತ್ತ ಉದ್ದಗಲಕ್ಕೂ ಅಲೆದಾಡಿದರು
ಆದರೆ ಯಾವ ದ್ವನಿಯಿಲ್ಲ, ಏನೂ ಕಾಣದು
ನಿಬಿಡದಲಿ ನಿಸರ್ಗದ ಸಹಾಯವೂ ಇಲ್ಲ.

ದಿನಕಳೆದು ದುಃಖದಲ್ಲಿ ಹತ್ತಿದರು ಬೆಟ್ಟ
ಕಣ್ಣೋಟ ಚೆಲ್ಲಿದರು ಬಂಜರು ನೆಲದಲಿ
ಅಲ್ಲಿಂದ ಕಾಣಿಸಿತು ಮರದ ಸೇತು
ಮನೆಯಿಂದ ತುಸು ದೂರದಲಿತ್ತು.

ರೋಧಿಸಿದರು ಮನೆಕಡೆಗೆ ತೆರಳುತ್ತ
ಸ್ವರ್ಗದಲಿ ನಾವೆಲ್ಲ ಜೊತೆಯಾಗೋಣ.
ಮಂಜಿನಲಿ ಹೆಜ್ಜೆಗುರುತು ತಾಯಿಗೆ ಕಂಡಿತು
ಹೌದು, ಅದೇ ಮಲ್ಲಿಗೆಯ ಪಾದದಚ್ಚು.

ಬೆಟ್ಟದ ತುದಿಯಿಂದಿಳಿಯುತ ಕೆಳಗೆ
ಆ ಪುಟ್ಟ ಹೆಜ್ಜೆ ಗುರುತಿನ ಹಿಂದೆ
ಮುಳ್ಳುಗಳ ಮಧ್ಯೆ ಹೆಜ್ಜೆ ನೋಡುತ
ಬಂಡೆಗಳ ಹತ್ತಿ ದೂರ ಹೋಗಲು

ವಿಶಾಲ ಬಯಲನು ಅವರು ದಾಟಿ
ಮತ್ತೂ ಮರೆಯಾಗದ ಹೆಜ್ಜೆ ನೋಡುತ್ತ
ದಾಟುತಲಿದ್ದರೂ ಕೊನೆಯೇ ಇಲ್ಲ
ಅದೇ ಮರದ ಸೇತುವೆಯವರೆಗೂ

ದಾಟುತಲಿ ಬಂದರು ಮಂಜುಪ್ರದೇಶ
ಹೆಜ್ಜೆಗಳನು ಒಂದೊಂದೆ ಮುಂದಿಡುತ
ಸೇತುವೆಯ ಹಲಗೆಯ ಮಧ್ಯದೊರೆಗೆ
ಬಂದರೆ ಮುಂದೇನೂ ಇರಲಿಲ್ಲ.

ಆದರೂ ನಂಬಿಕೆಗಳು ಈ ದಿನಕೆ ಇವೆ
ಅವಳೀಗಲೂ ಇರುವಳೆಂದು ನೆನಪು
ನೀವೀಗಲೂ ನೋಡಬಹುದು ಮಲ್ಲಿಗೆಯನು
ಕುಣಿದಾಡುತಿಹಳು ತಾ ಏಕಾಂಗಿ.

ಕಲ್ಲುಮಣ್ಣುಗಳ ನಡುವೆ ನಡೆವವಳು
ಏಕಾಂಗಿ ಹಾಡುವಳು ಪ್ರಕೃತಿ ಪುತ್ರಿ
ಕಾಡಿನ ಮಧ್ಯೆ ಈಗಲೂ ಕೇಳುತಿದೆ
ಮೊಳಗುತಿದೆ ಆಗಸವ ತುಂಬಿ.

[youtube=http://www.youtube.com/watch?v=sTR2T7TeV1c]

LUCY GRAY

OR, SOLITUDE

OFT I had heard of Lucy Gray:
And, when I crossed the wild,
I chanced to see at break of day
The solitary child.

No mate, no comrade Lucy knew;
She dwelt on a wide moor,
–The sweetest thing that ever grew
Beside a human door!

You yet may spy the fawn at play,
The hare upon the green; 10
But the sweet face of Lucy Gray
Will never more be seen.

“To-night will be a stormy night–
You to the town must go;
And take a lantern, Child, to light
Your mother through the snow.”

“That, Father! will I gladly do:
‘Tis scarcely afternoon–
The minster-clock has just struck two,
And yonder is the moon!” 20

At this the Father raised his hook,
And snapped a faggot-band;
He plied his work;–and Lucy took
The lantern in her hand.

Not blither is the mountain roe:
With many a wanton stroke
Her feet disperse the powdery snow,
That rises up like smoke.

The storm came on before its time:
She wandered up and down; 30
And many a hill did Lucy climb:
But never reached the town.

The wretched parents all that night
Went shouting far and wide;
But there was neither sound nor sight
To serve them for a guide.

At day-break on a hill they stood
That overlooked the moor;
And thence they saw the bridge of wood,
A furlong from their door. 40

They wept–and, turning homeward, cried,
“In heaven we all shall meet;”
–When in the snow the mother spied
The print of Lucy’s feet.

Then downwards from the steep hill’s edge
They tracked the footmarks small;
And through the broken hawthorn hedge,
And by the long stone-wall;

And then an open field they crossed:
The marks were still the same; 50
They tracked them on, nor ever lost;
And to the bridge they came.

They followed from the snowy bank
Those footmarks, one by one,
Into the middle of the plank;
And further there were none!

–Yet some maintain that to this day
She is a living child;
That you may see sweet Lucy Gray
Upon the lonesome wild. 60

O’er rough and smooth she trips along,
And never looks behind;
And sings a solitary song
That whistles in the wind.

2 comments

Leave a Reply

Your email address will not be published. Required fields are marked *