ಚೈನೀ ಕವಿತೆಗಳು

ಚೈನೀ ಉಪಾಸಕ ಹುಯಿ-ಕೈ (Wu-men Hui-k’ai) ರಚಿಸಿದ ಕೆಲವು ಕೊಆನ್ಸ್ (koans) ಎಂದು ಕರೆಯಲ್ಪಡುವ ಪುಟ್ಟ ಕವಿತೆಗಳು ಇಲ್ಲಿವೆ.

ಅತ್ಯಂತ ಶ್ರೇಷ್ಠಕಾಲ

ವಸಂತದಲ್ಲಿ ಸಾವಿರಾರು ಹೂಗಳು, ಶರತ್ಕಾಲದಲ್ಲಿ ಚಂದಿರ
ಬೇಸಿಗೆ ಕಾಲದಲ್ಲಿ ತಂಗಾಳಿ, ಚಳಿಗಾಲದಲ್ಲಿ ಮಂಜು.
ಅನಗತ್ಯ ವಿಷಯಗಳಿಂದ ನಿಮ್ಮ ಮನಸ್ಸಿಗೆ ಮೋಡ ಕವಿದಿರದಿದ್ದರೆ,
ಇದೇ ನಿಮ್ಮ ಜೀವನದ ಅತ್ಯಂತ ಶ್ರೇಷ್ಠಕಾಲ.

ಒಂದು ಕ್ಷಣವೇ
ಒಂದು ಕ್ಷಣವೇ ಅನಂತವಾಗಿದೆ;

ಮತ್ತು ಅನಂತತೆ ಈ ಕ್ಷಣದಲ್ಲಿದೆ.

ಯಾವಾಗ ನೀವು ಈ ಕ್ಷಣದ ಮೂಲಕ ನೋಡಬಲ್ಲಿರೋ,

ನೀವು ದೃಷ್ಟಾರನ ಮೂಲಕವೇ ನೋಡಬಲ್ಲಿರಿ.

ಮಹಾಮಾರ್ಗ

ಮಹಾಮಾರ್ಗಕ್ಕೆ ಬಾಗಿಲಿಲ್ಲ

ಆದರದಕ್ಕೆ ಸಾವಿರಾರು ಹಾದಿಗಳಿವೆ.

ನೀವು ಪ್ರತಿಬಂಧವನ್ನು ಹಾದು ನಡೆದರೆ,

ನೀವು ಏಕಾಂಗಿಯಾಗಿಯೇ ವಿಶ್ವವನ್ನು ಸುತ್ತಬಲ್ಲಿರಿ.

Leave a Reply

Your email address will not be published. Required fields are marked *