ಕತ್ತಲಿಲ್ಲದೇ ಬೆಳಕಿಲ್ಲ,
ಅಪರಿಮಿತ ಕತ್ತಲಿಂದ ಹುಟ್ಟಿದಂತೆ ಬೆಳಕು
ನನ್ನೆದೆಯ ನಿರಾಕಾರ ಪ್ರೇಮವೇ,
ಸಾಕಾರರೂಪತಾಳುತ್ತದೆ, ನಿನ್ನ ಬಯಸುತ್ತದೆ.
ಗಾಢ ಕತ್ತಲೆಯಂತ ನಿರಾಕಾರರೂಪಿ ಒಲವಲ್ಲಿಲ್ಲ ಬಯಕೆ,
ಅದು ಪಡೆದು ತೃಪ್ತ.
ಬೆಳಕೆಂದರೆ ವಿರಹ,
ಮುಂಜಾನೆ ಹುಟ್ಟಿ, ಆಗಸಕ್ಕೇರಿ
ಮೆಲ್ಲ ಸಂಜೆಗೆ, ಕತ್ತಲಿನ ಮಡಿಲಿಗೆ ಸೇರುತ್ತದೆ,
ಕತ್ತಲಲ್ಲಿ ದ್ವೈತವಿಲ್ಲ.
>ಕವಿತೆ ಇಷ್ಟವಾಯಿತು, ಬೆಳಕು ಕತ್ತಲಿನ ಮಡಿಲಿಗೆ ಸೇರುತ್ತದೆ, ಕತ್ತಲಲ್ಲಿ ದ್ವೈತವಿಲ್ಲ. ಸಾಲುಗಳು ಅರ್ಥಪೂರ್ಣವಾಗಿವೆ
>ವಾಹ್ ವಾ!
>mast re:)
>ಚೆಂದ ಇದೆ ಕವಿತೆ- ಚೇ