ನೆತ್ತಿಗೆ ಶುದ್ಧ ಕೊಬ್ಬರಿ ಎಣ್ಣೆ,
ಕ್ರಾಪು ಬಾಚಿ, ಹಣೆಗೆ ಗಂಧ,
ಗಲ್ಲಕ್ಕೊಂದು ಕಪ್ಪಿಟ್ಟುಬಿಟ್ಟರೆ
ಸಿದ್ಧಳಾದಂತೆ ನೀನು.
ಬಯಲ ದಾರಿಯಲ್ಲಿ ನಡೆದು
ಬೆಟ್ಟದ ಮಲ್ಲಿಗೆ ಕೊಯ್ಯಲು ಹೋಗೋಣ.
………….
ಕಮಲದೆಲೆಯ ಮೇಲೆ ಮುತ್ತೊಂದು ಮಿನುಗುತಿದೆ,
ತಂದುಕೊಡಲೆ ನಿನಗೆ,
ಕಮಲದಳದಂತೆ ಮಿನುಗುತಿರೆ ನಿನ್ನ ಕಣ್ಣುಗಳು
ಬೆಳಕಾಯಿತು ನನಗೆ.