ನೀಡಿದ ಮುತ್ತು ಉಳಿಯಿತು ನಿನ್ನ ಕೆನ್ನೆಯಲಿ
ನೀಡದ ಮುತ್ತು ಹರಡಿತು ಬಾನ ಅಗಲಕ್ಕೆ,
ನಿನ್ನನೇ ತಲುಪುವ ಹಂಬಲದಲಿ ಅರಳಿತು,
ನೀಡಿದ ಮುತ್ತಿಗೆ ಆಕಾರ ನೀನು
ನೀಡದ ಮುತ್ತಿಗೆ ನಿರಾಕಾರ
ನೀಡದ ಮುತ್ತು ನನ್ನಲ್ಲಿ ಉಳಿದು
ಎಲ್ಲ ದಿಕ್ಕಿಗೂ ಹರಿವಾಗ
ಅರಿವಾಗುವುದು ನನಗೆ ನನ್ನದೇ ಒಲವಿನ ಹರವು
ಒಂದು ಮುತ್ತೇ ಹರಡಿ
ಭೂಮಿ ಬಾನನೆಲ್ಲ ನನ್ನದಾಗಿಸುವುದು
ನನ್ನ ಒಲವಿಗೆ ಹೊಸ ದಿಕ್ಕು ನೀಡುವುದು
ನಿನ್ನ ನಿರಾಕಾರ ರೂಪಿಯಾಗಿಸುವುದು
ನನ್ನ ಉಕ್ಕಿಸಿ ಮಿತಿಮೀರಿಸುವುದು
ಮುತ್ತು ಒಲವಿನ ಮಾತು,
ಸಾಗರಕೆ ಅಲೆಯಂತೆ ಹೊಂದಿಹುದು
ಮುತ್ತನಿಡಲೇ ಸಾಗರದ ಒಲವು ಉಕ್ಕುವುದು
ನೀಡಿದ ಒಲವು ದಿಕ್ಕು ದಾರಿಯಲಿ ಸಾಗುವುದು
ನೀಡದ ಒಲವೇ ಆಗಸಕ್ಕೆ ಹಾರುವುದು.
>ಚೆನ್ನಾಗಿದೆ, ಮುತ್ತು ಒಲವಿನ ಮಾತು,ಸಾಗರಕೆ ಅಲೆಯಂತೆ ಹೊಂದಿಹುದುಮುತ್ತನಿಡಲೇ ಸಾಗರದ ಒಲವು ಉಕ್ಕುವುದು- ಈ ಸಾಲು ಇಷ್ಟವಾಯಿತು.
>ನೀಡಿದ ಮುತ್ತು…ನೀಡದ ಮುತ್ತು….ವಿಚಾರವೇ ಚೆನ್ನಾಗಿದೆ…ಅದಕ್ಕೆ ತಕ್ಕಂತ ಕವನವೂ ಚೆನ್ನಾಗಿದೆ…
>ತುಂಬಾ ಸುಂದರವಾದ concept ಈ ನೀಡದ ಮುತ್ತು!ಆದರೂ ನೀಡದ ಮುತ್ತುಗಳ stock ಹೆಚ್ಚಾಗದಿರಲಿ!
>ರಾಘವೇಂದ್ರ,ಕವಿತೆಯ ಟೈಟಲ್ಲೇ ಬಹಳ ಸುಂದರವಾಗಿದೆ.. ಉಕಾರದಿಂದ ಅಂತ್ಯವಾಗುತ್ತಿರುವ ಪ್ರಾಸಬದ್ದ ಸಾಲುಗಳು..'ಮುತ್ತು ಒಲವಿನ ಮಾತು,ಸಾಗರಕೆ ಅಲೆಯಂತೆ ಹೊಂದಿಹುದುಮುತ್ತನಿಡಲೇ ಸಾಗರದ ಒಲವು ಉಕ್ಕುವುದು'ಸಾಲುಗಳು ಇಷ್ಟವಾದವು..
>ಪರಾಂಜಪೆ, ಶಿವು ವಂದನೆಗಳು..ಸುನಾಥ್ ಸರ್,ಕೊಡದ ಮುತ್ತುಗಳಿಗೆ ಮಿತಿಯಿಲ್ಲವಾದ್ದರಿಂದಾಗಿ, ಸ್ಟಾಕ್ ಅನ್ನುವ ಮಾತೇ ಇಲ್ಲ, ಇಷ್ಟುಕೊಟ್ಟರೂ ಆ ಸ್ಟಾಕ್ ಕಡಿಮೆಯೂ ಆಗುವುದಿಲ್ಲ. ಆದರೆ, ನೀವು ಹೇಳಿದಂತೆ, ಕೊಡದಿದ್ದರೆ ಕಷ್ಟವಾಗುವುದಂತೂ ಹೌದು!ವಂದನೆಗಳು ಗೋದಾವರೀ..