ಬೆಲೆವೆಣ್ಣುಗಳ ಸಂಗದಲಿ
ರಾಮಾನುರಾಗ ಮೊಳೆಯುವುದು
ಜೋಕಾಲಿಯಾಡುತ್ತದೆ ಬದುಕು
ವಿರುದ್ಧಕ್ಕೆಳೆಯುವುದು ಮನಸು
ಮಂಗಳಾರತಿ ಹೊತ್ತಿಗೆ ಮೊಲೆಗನಸು.
ಸಂಪ್ರದಾಯ ಸರಿತೆ ನಿಶ್ಚಲ, ಕೊಳೆಯುವುದು.
ಸುವರ್ಣಪಾತ್ರೆಯೊಳಗೆ ಸತ್ಯ ಮುಚ್ಚಿಹುದು
ಕಣ್ಮುಚ್ಚಿಹನು ಸುವರ್ಣಕೋಟೆಯ ಸುಖದಲಿ
ಯುದ್ದವಿಲ್ಲದೇ ಗೆಲ್ಲಲಾರ, ದಾರಿಯಿಲ್ಲದೇ ನಡೆಯಲಾರ
ಹೆಗಲ ಹೆಣಭಾರವಿಳಿಸಿ ಹಗುರಾಗಲಾರ.
ದಿವದ ಮಳೆಸುರಿದು ಕೊಚ್ಚಿಹೋಗದೆ ಕಾಮಮೂರ್ತಿ
ಅರಳನೇ ಬಯಲಲ್ಲಿ ಬಯಲಾದ ರಾಮ?