ನಿನಗೆ ಮಾತ್ರ ಯಾವ ಭಾವವೂ ತಲುಪುವುದಿಲ್ಲವೇ?

ಆತ್ಮದ ಗೆಳತಿ ಎನ್ನಲೇ ನಿನ್ನ?
ಒಂದು ಮಾತಿಲ್ಲ, ಒಂದು ನೋಟವಿಲ್ಲ
ನನ್ನಷ್ಟಕ್ಕೇ ನಾನೇ ಮಾತನಾಡಿಕೊಳ್ಳುತ್ತೇನೆ
ನಿನ್ನ ಮಾತುಗಳನ್ನೂ!
 
ನಿನ್ನ ಹೆಸರು ನನ್ನ ಹೃದಯದ ಕಣಿವೆ ತುಂಬ
ಮಾರ್ದನಿಗೊಳ್ಳುತ್ತ ಪುಲಕ ತರುತ್ತದೆ.
ಮಾತಾಗದ ಭಾವಗಳೆಲ್ಲ ಪಲ್ಲವಿಸುತ್ತವೆ
ನಿನ್ನ ಕಂಗಳ ರೆಪ್ಪೆಗಳೊಮ್ಮೆ ಕದಲಿದರೂ ಸಾಕು
ಉಕ್ಕೇರುತ್ತದೆ ಶರಧಿ ಚಂದ್ರನೆಡೆಗೆ.
 
ನನ್ನ ಆತ್ಮದ ಸಖ್ಯಕ್ಕೆ ನಿನ್ನ ನಾಮ ಮತ್ತು ಭಾವರೂಪ
ನನ್ನ ಯಾತನೆಗೆ, ಸಂಭ್ರಮಕ್ಕೆ ನಿನ್ನದೇ ನೆನಪುಗಳ ಮಾಲೆ.
ನಿನಗೆ ಮಾತ್ರ ಯಾವ ಭಾವವೂ ತಲುಪುವುದಿಲ್ಲವೇ?
ದೂರದಲ್ಲೊಂದು ತಾರೆ ಮಿನುಗುತ್ತಲೇ ಇರುತ್ತದೆ;
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು, ನಿನ್ನ ದಾರಿಯಲ್ಲಿ
ನೀನು ನಡೆಯುತ್ತಲೇ ಇರುತ್ತೀಯ…..!

11 comments

  1. >"ನಿನ್ನ ಕಂಗಳ ರೆಪ್ಪೆಗಳೊಮ್ಮೆ ಕದಲಿದರೂ ಸಾಕುಉಕ್ಕೇರುತ್ತದೆ ಶರಧಿ ಚಂದ್ರನೆಡೆಗೆ."ವಾಹ್! ಸುಂದರವಾದ ಸಾಲುಗಳು.

  2. >Thank you for the comments…ಕನ್ನಡ Blogs ಗುಂಪಿನಲ್ಲಿ ಇನ್ನೊಂದು ಕನ್ನಡ blog ನೋಡಿ ಸಂತೋಷವಾಯಿತು.

  3. >ನಿಮ್ಮ ಹೆಸರು ತಿಳಿಯಲಿಲ್ಲ…"ನಿನ್ನ ಕಂಗಳ ರೆಪ್ಪೆಗಳೊಮ್ಮೆ ಕದಲಿದರೂ ಸಾಕುಉಕ್ಕೇರುತ್ತದೆ ಶರಧಿ ಚಂದ್ರನೆಡೆಗೆ."ನನಗೂ ತುಂಬಾ ಇಷ್ಟವಾಯಿತು….ಹೀಗೆ ಅಲೆದಾಡುತ್ತಾ.. ನಿಮ್ಮ ಬ್ಲಾಗಲ್ಲಿ ಬಿದ್ದೆ….ಮೊದಲ ಕವನ ಇಷ್ಟವಾಯ್ತು….ಉಳಿದ ಲೇಖನವನ್ನು ನಿದಾನವಾಗಿ ಓದುತ್ತೇನೆ….ನನ್ನ ಬ್ಲಾಗಿನ ಕಡೆಗೊಮ್ಮೆ ಬನ್ನಿ….ಅಲ್ಲಿ ಫೋಟೋಗಳಿವೆ ಅದಕ್ಕೆ ಸಂಭಂದ ಪಟ್ಟ ಲೇಖನಗಳಿವೆ. ನಿಮಗಿಷ್ಟವಾಗಬಹುದು…..ಆಹಾಂ! ಮನಃಪೂರ್ವಕವಾಗಿ ನಗಬೇಕೆ! ನಡೆದಾಡುವ ಭೂಪಟಗಳ ನೋಡಬನ್ನಿ…..

  4. >ನನ್ನ ಬ್ಲಾಗು ನನ್ನದೇ ಎನ್ನುವ ಜ್ಯೋತಿ ಇಂದಿರಾ ಅವರ ಬ್ಲಾಗ್ನಿಂದ ಇಲ್ಲಿಗೆ ಬ್ಂದಿದ್ದೇನೆ.ನಾನು ಕವನಗಳನ್ನು ಅಷ್ಟಾಗಿ ಓದುವುದಿಲ್ಲ.ಆದರೆ ನಿಮ್ಮ ಕವನಗಳು ಕಾಡಿನ ಹಾಡಿನಂತಿರುವುದರಿಂದ ಇಷ್ಟವಾಗಿದೆ.ಬ್ಲಾಗ್ ಲೇಔಟ್ ಸಹ ಮನಸೆಳೆಯುತ್ತದೆ.ಅಶೋಕ ಉಚ್ಚಂಗಿhttp://mysoremallige01.blogspot.com/

  5. >ಸರ್,ಕವನ ತುಂಬಾ ಸೊಗಸಾಗಿದೆ… "ನಿನ್ನ ಕಂಗಳ ರೆಪ್ಪೆಗಳೊಮ್ಮೆ ಕದಲಿದರೂ ಸಾಕುಉಕ್ಕೇರುತ್ತದೆ ಶರಧಿ ಚಂದ್ರನೆಡೆಗೆ." ಇವು ನನಗಿಷ್ಟವಾದ ಸಾಲುಗಳು…..ಪದಗಳ ಪ್ರಯೋಗದಲ್ಲಿ ತುಂಬಾ ಹಿಡಿತವಿದೆ…ಹೀಗೆ ಬರೆಯುತ್ತಿರಿ…..ಥ್ಯಾಂಕ್ಸ್…ಮತ್ತೆ ನನ್ನ ಬ್ಲಾಗಿನಲ್ಲಿ ಹೊಸ ಭೂಪಟಗಳು ಮತ್ತು ಆಹಾ ನನ್ನ ಮದುವೆಯಂತೆ ಹೊಸ ಲೇಖನವಿದೆ…ಬಿಡುವು ಮಾಡಿಕೊಂಡು ಬನ್ನಿ….

Leave a Reply to ರಾಘವೇಂದ್ರ ಮಹಾಬಲೇಶ್ವರ Cancel reply

Your email address will not be published. Required fields are marked *