ಯಾವ ದಿಕ್ಕಿಗೆ ನಡೆದರೂ…

ಕಿರಣಗಳೊಡೆಯುತ್ತವೆ ಎರೆಡೆರಡಾಗಿ
ಸುರಿಯುತ್ತವೆ ಅತ್ತ ನಿನ್ನ ಮೇಲೆ,
ಇತ್ತ ನನ್ನ ಮೇಲೆ.
ಎರೆಡು ಹೆಜ್ಜೆ ನೀನಿಡುವ ಹೊತ್ತಿಗೆ
ಗರಿಕೆಗಳ ಗಂಧ ಹರಡುತ್ತದೆ ಗಾಳಿಯಲ್ಲಿ
ಆವರಿಸುತ್ತದೆ ನನ್ನ, ನಿನ್ನ
ಕಾಲದಂತೆ ಅವಕಾಶವೂ ಕರಗುತ್ತದೆ,
ಉಳಿಯುವುದಿಲ್ಲ ನನ್ನ ನಿನ್ನ ನಡುವಿನ ಅಂತರ.

ಬಿಲ್ವಪತ್ರೆಯಿನ್ನೂ ಚಿಗುರುತ್ತಿರಬೇಕು ಅಲ್ಲವೇನೆ?
ಮಂಗಳಾರತಿ ಮುಗಿಸಿಕೊಂಡು ಹೊರಗೆ ಕಾಲಿಟ್ಟ
ನಿನ್ನ ಕಣ್ಣಲ್ಲೇನು ನಂದಾದೀಪ?
ಎಷ್ಟು ದೂರದವರೆಗೆ ಹಿಂಬಾಲಿಸುತ್ತದೆ ನಿನ್ನ
ಆ ಕರ್ಪೂರದ ಕಂಪು?

ಸುಮ್ಮನೇ ಹಿಂತಿರುಗಿ ನೋಡಬೇಡ,
ನಾನೇನೂ ಹಿಂಬಾಲಿಸುತ್ತಿಲ್ಲ.
ಬೆಟ್ಟದ ಮೇಲೆ ಮಲ್ಲಿಗೆಗಳರಳುತ್ತಿವೆ.
ಕಂಪಿನ ಕರೆಗೆ ಸೋತು ಹೆಜ್ಜೆ ಹಾಕುತ್ತಿದ್ದೇನೆ.
ಪ್ರೇಮವೆಂದರೆ ದೈವಿಕ ಕಂಪು,
ಯಾವ ದಿಕ್ಕಿಗೆ ನಡೆದರೂ
ತಲುಪಿಸುತ್ತದೆ ನಿನ್ನ ಕಡೆಗೇ…!

4 Comments

  1. >"ಪ್ರೇಮವೆಂದರೆ ದೈವಿಕ ಕಂಪು,ಯಾವ ದಿಕ್ಕಿಗೆ ನಡೆದರೂತಲುಪಿಸುತ್ತದೆ ನಿನ್ನ ಕಡೆಗೇ…" ಸಾಲು ಇಷ್ಟವಾಯಿತು. ಹೇಗೆ? ಏನು? ಎತ್ತ ಕೇಳದಿರಿ..ಕವನಗಳನ್ನು ಅನುಭವಿಸುವ ಕಲೆಯಷ್ಟೇ ಗೊತ್ತು.-ತುಂಬುಪ್ರೀತಿ,ಚಿತ್ರಾ

  2. >Nightingale,ಮೊದಲಿಗೆ ನಿಮ್ಮ ಬ್ಲಾಗ್ ವಿನ್ಯಾಸ ತುಂಬಾ ಹಿಡಿಸಿತು. ಅದನ್ನು ನೋಡುತ್ತ ಹೆಚ್ಚು ಸಮಯ ಕಳೆದೆ.ತುಂಬಾ ಚೆನ್ನಾಗಿವೆ ನಿಮ್ಮ ಕವನಗಳು.

  3. >nimma kavanagalu bahala chennagide ella kavanagala prathiyondu saalu eshta vaaythu Latha

Leave a Reply

Your email address will not be published. Required fields are marked *