ಇದೆಲ್ಲ ಸಂಭ್ರಮದ ಅಭೀಪ್ಸೆ…

>

ಆತ್ಮಗುಣಾಭಿಮಾನಿನಿ,
ಹೀಗೆಂದು ಕರೆಯಲೇ ನಿನ್ನ?
ಯಾವ ಒತ್ತಾಯಕ್ಕೂ ನೀನು ಒಲಿಯುವುದಿಲ್ಲ,
ನಿನ್ನ ಹೃದಯದಲ್ಲಿ ಅರಳದಿರುವುದರ ಕುರಿತು
ನೀನು ಮಾತೇ ಆಡುವುದಿಲ್ಲ.
ಬೆಟ್ಟದಂಚಲ್ಲಿ ಕಾಡು ಮಲ್ಲಿಗೆಗಳರಳಿವೆ,
ಕಂಪಿಗೆ ಸೋತು ಸುತ್ತುತ್ತೇನೆ,
ಜೇನುಗಂಪು ಕಾಡಿನ ತುಂಬ ತುಂಬಿದೆ
ಅಲೆಯುತ್ತೇನೆ…
ಅಲ್ಲೆಲ್ಲೂ ನೀನು ಕಾಣುವುದಿಲ್ಲ.
ಈ ಹುಡುಕಾಟವೆಲ್ಲ ಲೀಲೆಯಂತೆ,
ಈ ಅಲೆದಾಟವೆಲ್ಲ ರೆಕ್ಕೆಬಿಚ್ಚಿ ಹಾರಿದಂತೆ.
ಇದೆಲ್ಲ ಸಂಭ್ರಮದ ಅಭೀಪ್ಸೆ…
ನನಗೆ ಗೊತ್ತು, ನೀನಿರುವುದು ನನ್ನಲ್ಲಿಯೇ ಎಂದು.

5 comments

  1. >ತುಂಬಾ ಚೆನ್ನಾಗಿದೆ..ನಿಮ್ಮ ಬ್ಲಾಗ್..ಪುಟ್ಟ ಪುಸ್ತಕಗಳ ಪುಟ ತಿರುವಿದಂತೆ. ಚೆನ್ನಾಗಿ ಬರೀತೀರ..ಕವನಗಳ ಜೊತೆಗೆ ಲೇಖನಗಳನ್ನು ತುಂಬಿಸಿ.-ಚಿತ್ರಾ

  2. >ಅದ್ಭುತ ಡಿಸೈನ್ ಮಾರಯ ನಿಮ್ಮ ಬ್ಲಾಗ್.ಓದಲು ಮತ್ತೆ ಮತ್ತೆ ಬರುವೆ.ಡಿಸೈನ್ ನಂತೆ ಬರಹವೂ ಚುಂಬಕವಾಗಿರಲಿ, ನಮ್ಮಲ್ಲರನ್ನು ಆಲಿಂಗಿಸಲಿ.ಅಭಿನಂದನೆಗಳು.ಒಲವಿನಿಂದಬಾನಾಡಿ

  3. >ನಾನು ನೋಡೀದ ಬ್ಲಾಗಿಗಳ ಪೈಕಿ ಅದ್ಭುತ ಡಿಸೈನ್ ನಿಮ್ಮದೇ .ಸ್ವಲ್ಪ ಚೈಲ್ಡಿಶ್ ಕಾಣ್ಸುತ್ತೆ ಲೇ ಔಟ್ ಆದ್ರೂ ಸಕ್ಕತ್ ಆಗಿದೆ.

  4. >ನಿಮ್ಮ ಬ್ಲಾಗ್ template ತುಂಬಾ ಚೆನ್ನಾಗಿದೆ. ಈ ವರೆಗೆ ಇಂತಹ ಡೆಸೈನ್ ನೋಡಿರಲಿಲ್ಲ! ಇನ್ನು ಕವನ ಅದಕ್ಕಿಂತಲೂ ಚೆನ್ನಾಗಿದೆ ಅದ್ವೈತ ಸಿದ್ಧಾಂತದಲ್ಲಿ ಕೊನೆಗೊಂಡಂತಿದೆ?

Leave a Reply

Your email address will not be published. Required fields are marked *