’ಅಭೀಪ್ಸೆ’ ಕಾದಂಬರಿ ಕುರಿತು..

ನಾಂದಿ ಅದು ಕಲ್ಗುಡಿ ಎಂಬ ಊರಿಗೆ ಹೊಂದಿಕೊಂಡಂತಿದ್ದ ಕಾಡಿನಲ್ಲಿರುವ ಒಂಟಿ ಮನೆ. ಗಾಢ ಕತ್ತಲಿದ್ದ ಆ ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆಯ ಮುಂದಿನ ಕಟ್ಟೆಯ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ ವಿಶ್ವಾಮಿತ್ರರು ಎದ್ದು ಮನೆಯೊಳಗೆ ನಡೆದಾಗ, ಅವರ ಸಾನಿಧ್ಯದಲ್ಲಿ ಕುಳಿತಿದ್ದ ಅವರ ಮಡದಿಗೆ ಅಚ್ಚರಿಯಾಯಿತು. ಎಂದೂ ಇಷ್ಟು ಬೇಗ ಧ್ಯಾನದಿಂದ ಎದ್ದವರಲ್ಲ. ಅವರೂ ಎದ್ದು ಒಳಗೆ ಹೋದಾಗ, ವಿಶ್ವಾಮಿತ್ರರು ಮಿಣುಕು ದೀಪ ಹಿಡಿದುಕೊಂಡು ತಮ್ಮ ಗ್ರಂಥ ಭಂಡಾರದಿಂದ ಒಂದು ಪುಟ್ಟ ಪುಸ್ತಕವನ್ನು ತೆಗೆದುಕೊಂಡು ಏನನ್ನೋ ಹುಡುಕುತ್ತಿರುವುದನ್ನು ಕಂಡರು. ಅವರ…

Continue reading →

ಸುಳಿಗಾಳಿ

ನಿನಗಿನ್ನೂ ನೆನಪಿದೆಯೇ, ಪಶ್ಚಿಮರಶ್ಮಿ ಸುರಿದಿದ್ದ ನೀಲಗಿರಿಗಳ ದಾರಿಯಲ್ಲಿ ನಡೆಯುತ್ತಿದ್ದ ನಾವು ಒಮ್ಮೆಲೇ ನಿಂತರೆ, ಇದ್ದಕ್ಕಿದ್ದಂತೆ ಎದ್ದ ಸುಳಿಗಾಳಿಯೊಂದು ನಮ್ಮೆದುರೇ ದಾಟಿ ಹೋಗಿದ್ದು? ಎರೆಡು ಹೆಜ್ಜೆಗಳು ಮುಂದಿಟ್ಟಿದ್ದರೆ ನಮ್ಮನ್ನೂ ಸುತ್ತಿಸಿಕೊಂಡು ಹೋಗುತ್ತಿತ್ತು ಎಂದು ನಕ್ಕಿದ್ದು? ಸುಳಿಗಾಳಿ ಹೀಗೆ ಸುಳಿವಾಗ ಮಿಡತೆಗಳು ಸಿಡಿದೋಡುತ್ತವೆ, ಇರುವೆಗಳು ನೆಲವನ್ನಪ್ಪುತ್ತವೆ, ಎಲೆಗಳು ಪಟಪಟಿಸಿ, ಹಸಿರಲ್ಲಿ ಗವಿಯುತ್ತಿದ್ದ ಹುಲ್ಲು ಹೂಗಳ ಗಂಧ ಮೋಡಗಳ ಕಡೆ ಮುಖ ಮಾಡುತ್ತದೆ. ನೋಡನೋಡುತ್ತಲೇ, ಬಯಲ ಸುಳಿಗಾಳಿ ಬೇಲಿಯಂಚಿನಲ್ಲಿ ಮರೆಯಾಗುತ್ತದೆ. ಏನು ಗಾಳಿಯ ಈ ಅವತಾರ? ಏನು ಈ ಲೀಲೆ? ಒಮ್ಮೆಮ್ಮೆ…

Continue reading →

ನಿಶ್ಚಲ ತಾರೆ ನೀನು

ಎಲ್ಲ ಬೆಳಕು ಕಳೆದ ಮೇಲೂ ಉಳಿಯುವ ನಿಶ್ಚಲ ತಾರೆ ನೀನು, ನಿನ್ನ ಮರೆತು ಹೇಗಿರಲಿ ನಾನು. ಈ ನಿಶಿ ನಿರಾಮಯತೆಯಲ್ಲಿ ಎದೆ ಚಾಚಿದ ಕೈಗೆ ಸಿಕ್ಕಂತೆ, ಕಣ್ಣು ತುಂಬಿಸುವೆ ಜಲಧಿ ಎದ್ದಂತೆ. ಚಾಚಿದಷ್ಟು ದೂರ, ಇನ್ನು ದೂರ. ಇನ್ನೂ ಚಾಚುತ್ತೇನೆ, ಸಿಕ್ಕುಬಿಡುವೆಯೆಂಬ ಭಯದಲ್ಲಿ. ಇಲ್ಲಿದ್ದು ಎಲ್ಲೆಲ್ಲೂ ಅರಳುವೆ, ಸುರ ಸುರಭಿ ಘಮಘಮಿಸಿ. ನಾನು ಕೈ ಚಾಚುತ್ತಲೇ ಇರುತ್ತೇನೆ, ನೀನು ಸಿಗದಂತಿರು, ಈ ಹಂಬಲದಲ್ಲೆ ಸುಖವಿದೆ.

Continue reading →

ಓ ನಗೆಯೆ ನೀನೆಷ್ಟು ಚೆನ್ನ

ಓ ನಗೆಯೆ ನೀನೆಷ್ಟು ಚೆನ್ನ ಸುಧೆ ತುಂಬಿದ ಕಳಶವು ಚಿನ್ನ ನೀನು ಬೆಳದಿಂಗಳು, ತಂಗಾಳಿ ಹುಣ್ಣಿಮೆಯ ಸೊಬಗು, ಹೋಳಿ ನೀನಿರುವ ಮೊಗ ಕಾಮನಬಿಲ್ಲು ಏಕೆ ಓಡುವೆ ನೀನೊಮ್ಮೆ ನಿಲ್ಲು ಆಗಸವ ತುಂಬಿದಂತೆ ಬೆಳ್ಳಿ ಮೋಡ ಕಣ್ಣೆದುರೆ ನಿಂತಿರು, ಮತ್ತೆ ಓಡಬೇಡ ಹಸಿರಹುದು ಈ ಹೃದಯದಿ ನೀನಿರಲು ಬಯಸುವುದು ಸದಾ ಜೊತೆಗಿರಲು ಹೊರಹೋಗುವೆಯೆಂದು ಹೆದರಿದೆ ಮನ ಕೋಪದ ಬಿಸಿಯಲಿ ತಂಗಾಳಿಯಾಗು ದಿನಾ. (17-3-1999)

Continue reading →

ಶಿಶಿರಕರ್ಪೂರವುರಿಸಿ ವಸಂತಮಂಗಳಾರತಿ ಬೆಳಗುವ ಕಾಲ

ಹಸಿರು ಬೆಟ್ಟದ ಮೇಲೆ ಎಳೆಬಿಸಿಲು ಹಾಸಿದಂತೆ ಇವಳ ಮಂದಹಾಸ ತಿಳಿಗಾಳಿಯಂತಹ ಬೆಳಕು ಮೂಡುವಾಗ ತೆಳುವಲೆಗಳು ನದಿಯಲ್ಲಿ ಮೂಡುವಂತೆ ತಿಳಿದೇಳುವ ಮೊದಲು ನಿದ್ದೆಯಲಿ ಮಂದಹಾಸ ಉದಯನುದಯಿಸಿ ಬಗೆಯಲಿ ಅದರದಳಗಳನರಳಿಸುವಂತೆ ತೋರುವುದು ಶಿಶಿರಕರ್ಪೂರವುರಿಸಿ ವಸಂತಮಂಗಳಾರತಿ ಹಸಿರುದೇಗುಲವ ಬೆಳಗುವ ಕಾಲ.. ಕಣ್ಣು ಬಿಡುತ್ತಾಳೆ ಮೆಲ್ಲಗೆ, ಇಬ್ಬನಿ ಕರಗುವಂತೆ ರಾತ್ರಿ ಕಳೆದ ಪ್ರಕೃತಿ, ಮುಂಜಾನೆಗೆ ನೀಡಿದ ಹೊಸಜನ್ಮದಲಿ ಹೊಸಮಗುವಂತೆ ಕಣ್ಣರಳಿಸುತ್ತಾಳೆ.

Continue reading →

ಹಂಚಿಕೊಂಡ ಗುಟ್ಟು

ಒಂದು ದುಃಖದ ಗೀತೆಯನ್ನು ನನ್ನಷ್ಟಕ್ಕೆ ನಾನು ಹಾಡಿಕೊಳ್ಳುವ ಹೊತ್ತು ಸಂಜೆ ತನ್ನ ಮೌನ ಮುರಿಯಿತು, ಮುಗುಳ್ನಕ್ಕಿತು. ಗೀತೆ ದುಃಖವನ್ನೊ, ದುಃಖ ಗೀತೆಯನ್ನೊ ಎರಡೂ ಕರಗಿಹೋದವು. ಮೆಲ್ಲನೆ ಚಂದ್ರ ಮೂಡಿಬಂದ. “ಸಾವಿಲ್ಲ ಹೋಗು” “ದುಃಖಕ್ಕೇನು?”, ಆತಂಕದಿಂದ ಕೇಳಿದೆ, ಮುಗುಳ್ನಕ್ಕೆ. “ಅರ್ಥವಾದ ಮೇಲೆ ಹಠ ಮಾಡ ಬಾರದು, ಹೊರಡು” ಗಾಢ-ಗೂಢ ಗಾಳಿ ಬೀಸತೊಡಗಿತು. ಕಣ್ಣಲ್ಲಿ ಸಂಭ್ರಮವನ್ನು ಗುರುತಿಸಿದ ತಂಗಿ “ಏನು” ಅಂದಳು. ಇನ್ನಾರದೋ ಬಳಿ ಹಂಚಿಕೊಂಡ ಗುಟ್ಟು, ಆ ಲೋಕಕ್ಕೆ ನೀನಿನ್ನೂ ಬಂದಿಲ್ಲವಲ್ಲೇ ಕಂದ! “ಏನಿಲ್ಲ” ಅಂದೆ. ಮಾವಿನಮರವನ್ನು ವಸಂತ…

Continue reading →

“ಅಷ್ಟು ದೊಡ್ಡ ಮೊಲವೆ?”

ಅಮ್ಮ ಮೊರದಲ್ಲಿ ಅಕ್ಕಿಯಿಟ್ಟುಕೊಂಡು ಆರಿಸುತ್ತ ಕಟ್ಟೆಯ ಮೇಲೆ ಕುಳಿತಿದ್ದಳು. ಸ್ವಲ್ಪ ದೂರದಲ್ಲಿ ಕುಳಿತು, ಲಂಗದಲ್ಲಿ ಸಣ್ಣ ಕಲ್ಲುಗಳನ್ನಿಟ್ಟುಕೊಂಡು ಒಂದೊಂದನ್ನೇ ಹಾರಿಸಿ ಹಿಡಿಯುತ್ತಾ ರಾಮನಿಗಾಗಿ ಕಾಯುತ್ತಿದ್ದಳು ಧನ್ಯಾ. ಅವಳು ಬರುವ ಹೊತ್ತಿಗೆ ಅವನು ಎಲ್ಲಿಗೋ ಹೋಗಿದ್ದ. ಹಿಂದಿನ ದಿನ ಇಬ್ಬರೂ ಹೋಗಿ ಹಳ್ಳದ ದಂಡೆಯ ಬಳಿ ಹರಡಿ ಬಿದ್ದಿದ್ದ ಬಿಳಿ ಕಲ್ಲು ಹರಳುಗಳನ್ನು ಆಯ್ದುಕೊಂಡು ಬಂದಿದ್ದರು. ಆಗಿನಿಂದ ಅವುಗಳನ್ನು ಧನ್ಯಾ ಒಮ್ಮೆಯೋ ಕೈಬಿಟ್ಟಿರಲಿಲ್ಲ. ಮಲಗುವಾಗಲೂ ತನ್ನ ಪುಟ್ಟ ದಿಂಬಿನ ಕೆಳಗೇ ಇಟ್ಟುಕೊಂಡು ಮಲಗಿದ್ದಳು. ರಾಮನೊಂದಿಗೆ ಎಲ್ಲಿಗಾದರೂ ಹೋಗಬಹುದು ಅನ್ನುವ…

Continue reading →

ಸದ್ಯೋಪೂರ್ಣ

ಹಲ್ಲು ನಾಟಿಸಿ ಎರಡು ಹನಿ ತೊಟ್ಟಿಕ್ಕಿಸಿ ನನ್ನ ನೀಲಿ ಆಗಸವಾಗಿಸಿ ಹೋದೆ ಎಲ್ಲು ನಿಲ್ಲದ, ಎಲ್ಲು ಸಲ್ಲದ ಎಲ್ಲೆಯಿಲ್ಲದವನಾದೆ ಭದ್ರತೆಯ ಪ್ರಯತ್ನಗಳೆಲ್ಲ ಅಭದ್ರನಾಗಿಸಿವೆ ನನ್ನ. ಕಾಲಿಲ್ಲದ ನಿನ್ನ ಹೆಜ್ಜೆ ಗುರುತು ಅರಸುತ್ತ ಕಿವಿಯಿಲ್ಲದ ನಿನ್ನ ಅತ್ತು ಅತ್ತು ಕರೆಯುತ್ತ ಪೊದೆ ಸರಸರದಲ್ಲಿ, ಪೊರೆ ಉದುರಿದಲ್ಲಿ ಜೀವನ ಕರಗುತಿದೆ ನಿನ್ನ ಹುಡುಕುತ್ತ. ಗೂಬೆಗೊಂದು ಗೂಡು, ಬಾವಲಿಗೊಂದು ಕೋಡು ಆತ್ಮ ಆತುಕೊಳ್ಳದು ಎಲ್ಲೂ, ತನ್ನಲ್ಲೆ ಹೊರತೂ ತನಗೆ ತಾನೆ ಜೋತವ, ತನ್ನಲ್ಲೆ ನಿಂತವ ಮುಕ್ತ. ಇನ್ನೊಮ್ಮೆ ನಾಟಿಸು ಹಲ್ಲು, ಹೀರು…

Continue reading →

ಎರಡಲ್ಲ – ಕಥೆ

ಒಂದು ಮುಂಜಾನೆ ಆಟಕ್ಕೆಂದು ಹೋಗಿದ್ದ ರಾಮ, ಬರುವಾಗ ತನ್ನ ಜೊತೆ ಹಾವೊಂದನ್ನು ಕರೆದುಕೊಂಡು ಮನೆಗೆ ಬಂದ. ಮಗನ ದನಿ ಕೇಳಿ ಹೊರಗೆ ಬಂದ ಅಮ್ಮ ಬೆಚ್ಚಿಬಿದ್ದಳು. ಎರಡು ಮಾರು ಉದ್ದವಿರಬೇಕು, ಮಿರಿಮಿರಿ ಮಿಂಚುವ ಕರಿಮೈಯ ಹಾವು ಅದು. ಚೀರುತ್ತ ಒಳಗೆ ಓಡಿ ಬಂದದ್ದನ್ನು ನೋಡಿ ರಾಮನ ಅಪ್ಪ ಹೊರ ಬಂದರು. ಅಂಗಳದಲ್ಲಿ ರಾಮನ ಎತ್ತರಕ್ಕೆ ಹೆಡೆಯೆತ್ತಿಕೊಂಡು ನಿಂತ ಸರ್ಪದ ಕುತ್ತಿಗೆಯನ್ನು ಅವನ ಕೈ ಅವನಿಗರಿವಿಲ್ಲದಂತೆ ಸವರುತ್ತಿವೆ. ಹಿಂದೆ, ಬೇಲಿಯ ಗೇಟಿಗೆ ಒರಗಿಕೊಂಡು, ಚಡಪಡಿಕೆಯಲ್ಲಿ ನಿಂತಿದ್ದಾಳೆ ಧನ್ಯಾ. ಮುಂಜಾನೆಯೇ…

Continue reading →

ಮಣಿಪದ್ಮ

ಬೆಟ್ಟದಡಿ ಅರಳಿವೆ ಕಾಡುಮಲ್ಲಿಗೆಗಳು ಪಾದಕೆ ತಾಕಿದರು ಪರಿವೆಯಿಲ್ಲ ಕಣಗಿಲೆ ಹುಡುಕಿ ಆಗಸದೆಡೆ ಕಣ್ಣು. ಯಾವ ಹೂವಿನಲ್ಲು ಇಲ್ಲದಿಲ್ಲ ಚೆನ್ನೆ ನಿನ್ನ ಚೆನ್ನಮಲ್ಲಿಕಾರ್ಜುನ ನಾನು. – ಮಣಿಪದ್ಮ ಅಂದರೇನು?

Continue reading →